ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ದೀಕ್ಷಿತಾಗೆ ಜಿಲ್ಲಾಧಿಕಾರಿ ದಿನಚರಿ ನೋಡುವ ಭಾಗ್ಯ!

ವರದಿ: ರಹೀಂ ಉಜಿರೆ

ಉಡುಪಿ: ಜಿಲ್ಲಾಧಿಕಾರಿಯ ದಿನಚರಿ ಹೇಗಿರುತ್ತದೆ? ಅವರು ಏನೆಲ್ಲ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ? ಎಂಬ ಕುತೂಹಲ ಎಲ್ಲರಿಗೂ ಇರುತ್ತೆ. ಅದಕ್ಕಿಂತ ಹೆಚ್ಚಾಗಿ ಡಿಸಿ ಜೊತೆ ಒಂದಿಡೀ ದಿನ ಕಳೆಯುವ ಭಾಗ್ಯ ಸಿಗುವುದು ಕಡಿಮೆ. ಆದರೆ ಕೋಟದ ವಿವೇಕ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ದೀಕ್ಷಿತಾ ಅವರಿಗೆ ಈ ಅವಕಾಶ ದೊರೆತಿದೆ.

ಹೌದು,ಆಗಸ್ಟ್ 15 ರಂದು ಇಡೀ ದಿನ ದೀಕ್ಷಿತಾ ,ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಮ್ ಅವರೊಂದಿಗೆ ಇದ್ದು, ಅವರ ದಿನಚರಿಯನ್ನು ಹತ್ತಿರದಿಂದ ವೀಕ್ಷಿಸಿದ್ದಾರೆ.

ಕೌಶಲಾಭಿವೃದ್ಧಿ ಉದ್ಯಮಶೀಲತೆ, ಜೀವನೋಪಾಯ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವ ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು ಸರಕಾರ ಹಾಗೂ ಕರ್ನಾಟಕ ಕೌಶಲಾಭಿವೃದ್ಧಿ ನಿಗಮ ಒದಗಿಸಿಕೊಟ್ಟಿದೆ.

ಜಿಲ್ಲಾಧಿಕಾರಿ ಕಚೇರಿಯಿಂದ ಬೆಳಗ್ಗೆ 9 ಗಂಟೆ ಸುಮಾರಿಗೆ ಬ್ರಹ್ಮಾವರದ ಹೇರೂರಿನಲ್ಲಿರುವ ದೀಕ್ಷಿತಾ ಅವರ ಮನೆಗೆ ಸರಕಾರಿ ಕಾರನ್ನು ಕಳುಹಿಸಲಾಗಿತ್ತು.ಕಾರಿನಲ್ಲೇ ಗತ್ತಿನಿಂದ ಉಡುಪಿಗೆ ಬಂದ ವಿದ್ಯಾರ್ಥಿನಿಯನ್ನು ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.

ಬೆಳಿಗ್ಗೆ ತಾ.ಪಂ. ಕಚೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಜಿಲ್ಲಾಧಿಕಾರಿ ಸಹಿತ ವಿವಿಧ ಅಧಿಕಾರಿಗಳ ಸಭೆಯಲ್ಲಿ ವಿದ್ಯಾರ್ಥಿನಿ ಭಾಗವಹಿಸಿದ್ದಾಳೆ. ನಂತರ ಅಜ್ಜರಕಾಡು ಮೈದಾನದಲ್ಲಿ ಜಿಲ್ಲಾ ರಜತಮಹೋತ್ಸವದ ಕಾರ್ಯಕ್ರಮದ ಸಿದ್ಧತಾ ಸಭೆಯಲ್ಲೂ ಜಿಲ್ಲಾಧಿಕಾರಿ ಜೊತೆ ದೀಕ್ಷಿತಾ ಇದ್ದಳು. ಅಲ್ಲಿಂದ ಮಣಿಪಾಲದ ಕಂಟ್ರಿಇನ್ ನಲ್ಲಿ ನಡೆದ ಸಚಿವರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿಯವರೊಂದಿಗೆ ಆಗಮಿಸಿ, ವೇದಿಕೆಯ ಕೆಳಗೆ ಕುಳಿತಳು.

ಬಳಿಕ ಮಧ್ಯಾಹ್ನದ ಊಟವನ್ನೂ ಜಿಲ್ಲಾಧಿಕಾರಿಯೊಂದಿಗೆ ಸವಿದಳು.ಒಟ್ಟಾರೆ ಇದೊಂದು ಅಪೂರ್ವ ಅವಕಾಶ.ಈ ಅವಕಾಶಕ್ಕೆ ದೀಕ್ಷಿತಾ ರೋಮಾಂಚನಗೊಂಡಿದ್ದಾಳೆ.ಡಿಸಿ ಕೂಡ ಬಹಳ ಆತ್ಮೀಯತೆಯಿಂದಲೇ ವಿದ್ಯಾರ್ಥಿನಿಗೆ ತಮ್ಮ ದಿನದ ಕಾರ್ಯಕ್ರಮ ಮತ್ತು ಕಾರ್ಯವೈಖರಿಗಳ ಬಗ್ಗೆ ಮಾಹಿತಿ ನೀಡಿದರು.

Edited By : Shivu K
Kshetra Samachara

Kshetra Samachara

20/08/2022 12:42 pm

Cinque Terre

4.04 K

Cinque Terre

0

ಸಂಬಂಧಿತ ಸುದ್ದಿ