ಮೂಡುಬಿದಿರೆ: ತಾಲೂಕಿನ ಇರುವೈಲು ಗ್ರಾಮಸ್ಥ ಪ್ರವೀಣ್ ಶೆಣೈ, ಪೂವಣಿಬೆಟ್ಟು ವ್ಯಾಪ್ತಿಯ ಜನರು ವಿದ್ಯುತ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಹಾಗೂ ಗೃಹಿಣಿಯರು ಬೇಸತ್ತಿದ್ದಾರೆ. ಈ ಸಮಸ್ಯೆಗಳನ್ನು ಲೈನ್‌ಮ್ಯಾನ್ ಸಿಬ್ಬಂದಿಗೆ ಕರೆ ಮಾಡಿದರೆ, ನಮ್ಮ ಅವಧಿಯು 5 ಗಂಟೆಯವರೆಗೆ ಮಾತ್ರ ಕೆಲಸದ ಅವಧಿ, ಉಳಿದ ಸಮಯದಲ್ಲಿ ಜನರ ಕರೆಗಳಿಗೆ ಸ್ಪಂದಿಸುವುದಿಲ್ಲ ಎನ್ನುತ್ತಾರೆ ಎಂದು ಮೆಸ್ಕಾಂ ಸಹಾಯಕ ನಿರ್ದೇಶಕ ಮೋಹನ್ ಟಿ. ಅವರ ಬಳಿ ಸಮಸ್ಯೆ ವ್ಯಕ್ತಪಡಿಸಿದರು.
ಇದಕ್ಕೆ ಸ್ಪಂದಿಸಿದ ಮೆಸ್ಕಾಂ ಅಧಿಕಾರಿ ರಜೆ ಇದ್ದರೂ ಇಲ್ಲದೇ ಹೋದರೂ ಲೈನ್‌ಮ್ಯಾನ್‌ಗಳು ಒಂದು ವೇಳೆ ಸಮಸ್ಯೆ ಇದ್ದ ಸ್ಥಳಕ್ಕೆ ಭೇಟಿ ನೀಡಲಾಗದೇ ಹೋದರೂ ಮೆಸ್ಕಾಂ ಕಚೇರಿಗೆ ನೇರವಾಗಿ ಕರೆ ಮಾಡಿದರೆ ತಕ್ಷಣ ಸಮಸ್ಯೆಯನ್ನು ಬಗೆಹರಿಸಿ ಕೊಡಲಾಗುವುದು ಎಂದರು.
Kshetra Samachara
19/03/2022 07:02 pm