ಮೂಡುಬಿದಿರೆ: ಪುರಸಭೆ ವ್ಯಾಪ್ತಿಯಾದ್ಯಂತ ಮೂರು ಕಡೆಗಳಲ್ಲಿ ಸಂಪರ್ಕ ರಸ್ತೆ ಮತ್ತು ಕಲ್ಸಂಕ ಕಿರು ಸೇತುವೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ಅವರು ಇಂದು ಲೋಕಾರ್ಪಣೆಗೊಳಿಸಿದರು.
ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ 19.43 ಲಕ್ಷ ರೂ. ಮೊತ್ತದ ಕಲ್ಸಂಕ ಕಿರು ಸೇತುವೆ, 15ನೇ ಹಣಕಾಸು ಮತ್ತು ಪುರಸಭಾ ನಿಧಿ ಒಟ್ಟುಮೊತ್ತ 21.00ಲಕ್ಷ ವೆಚ್ಚದಲ್ಲಿ ವಿಜಯ ನಗರ ಮಸೀದಿಯಿಂದ ಕೃಷ್ಣ ಕಟ್ಟೆಯವರೆಗೆ ರಸ್ತೆ ಕಾಂಕ್ರಿಟೀಕರಣ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, 15ನೇ ಹಣಕಾಸು ಮತ್ತು ಪುರಸಭಾ ನಿಧಿ ಒಟ್ಟುಮೊತ್ತ 21.00ಲಕ್ಷ ವೆಚ್ಚದ ಸ್ವರಾಜ್ಯ ಮೈದಾನದ ರಿಂಗ್ ರೋಡ್ ನಿಂದ ಬಿಲ್ಲವ ಸಂಘವ ವರೆಗೆ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಮಾನಾಥ ಕೋಟ್ಯಾನ್ ಅವರೊಂದಿಗೆ ಪುರಸಭಾ ಮುಖ್ಯಾಧಿಕಾರಿ ಇಂಧು ಎಂ., ಇಂಜಿನಿಯರ್ ಪದ್ಮನಾಭ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ ಶಶಿಕಿರಣ್, ಸದಸ್ಯರಾದ ರಾಜೇಶ್ ನಾಯ್ಕ್ ಮತ್ತು ನಾಗರಾಜ್ ಪೂಜಾರಿ ಅವರನ್ನು ಬಿಲ್ಲವ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಗೌರವಿಸಿದರು.
ಕೊರೊನಾಕ್ಕೆ ತುತ್ತಾದ ಕುಟುಂಬಗಳಿ ತಲಾ ರೂ.1ಲಕ್ಷ ಚಕ್ ಅನ್ನು ಹಸ್ತಾಂತರಿಸಲಾಯಿತು.
ಕಸ ಸಂಗ್ರಹ ವಾಹನ: ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 9 ಮತ್ತು 12ನೇ ವಾರ್ಡಿಗೆ ಹಸಿಕಸ ಮತ್ತು ಒಣಕಸವನ್ನು ಬೇರ್ಪಡಿಸಿ ಸಂಗ್ರಹಿಸುವ ವಿಧಾನದ ವಾಹನವನ್ನು ಪುರಸಭೆಗೆ ನೀಡಲಾಯಿತು.
ಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ, ಜಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಎಂ, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಹಾಗೂ ಕೃಷ್ಣ ರಾಜ್ ಹೆಗ್ಡೆ, ಬಿಲ್ಲವ ಸಂಘದ ಅಧ್ಯಕ್ಷ ಪಿ.ಕೆ ರಾಜು ಪೂಜಾರಿ, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ವಕೀಲ ಕೆ.ಆರ್ ಪಂಡಿತ್ ಭಾಗವಹಿಸಿದ್ದರು.
Kshetra Samachara
03/03/2022 06:36 pm