ವರದಿ: ರಹೀಂ ಉಜಿರೆ
ಉಡುಪಿ: ಮಾರ್ಚ್ 4ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಅದ್ಯತೆ ನೀಡುವುದು ಸಾಮಾನ್ಯ. ಅನ್ನದಾತನ ಬೇಕು- ಬೇಡಗಳಿಗೆ ಸ್ಪಂದಿಸಬೇಕಿರುವುದು ಸರಕಾರದ ಆದ್ಯ ಕರ್ತವ್ಯ ಕೂಡ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತ ಮುಖಂಡರನ್ನು 'ಪಬ್ಲಿಕ್ ನೆಕ್ಸ್ಟ್' ಮಾತನಾಡಿಸುವ ಪ್ರಯತ್ನ ಮಾಡಿತು.
ಮುಖ್ಯವಾಗಿ ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಗಮನಿಸಬೇಕಾದ ಸಂಗತಿ ಎಂದರೆ, ಜಿಲ್ಲಾವಾರು ಭೌಗೋಳಿಕ ಭಿನ್ನತೆ. ಅಂದರೆ ಯೋಜನೆಯೊಂದನ್ನು ಇಡೀ ರಾಜ್ಯಕ್ಕೆ ಅನ್ವಯಿಸುವ ಬದಲಾಗಿ ಕರಾವಳಿ, ಮಲೆನಾಡು, ಬಯಲು ಸೀಮೆ... ಹೀಗೆ ಜಿಲ್ಲಾವಾರು ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಯೋಜನೆ ರೂಪಿಸಿದರೆ ಒಳ್ಳೆಯದು ಎಂಬುದು ಕೃಷಿಕ ಮುಖಂಡರ ಅಭಿಪ್ರಾಯ.
ಬಯಲುಸೀಮೆಗೆ ಘೋಷಿಸುವ ಯೋಜನೆಗಳಿಂದ ಕರಾವಳಿಗೆ ಖಂಡಿತ ಉಪಯೋಗ ಕಡಿಮೆ. ಕಾರಣ ಇಲ್ಲಿರುವುದು ಸಣ್ಣಸಣ್ಣ ಹಿಡುವಳಿದಾರರು. ಅದೇ ರೀತಿ ರಾಜ್ಯದ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯ ಬೆಳೆ ಬೆಳೆಯಲಾಗುತ್ತದೆ.
ಇನ್ನು ಜಿಲ್ಲೆಗೆ ಸಂಬಂಧಿಸಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ, ಕೃಷಿ ಕಾಲೇಜು ಸ್ಥಾಪನೆ, ಭತ್ತಕ್ಕೆ ಬೆಂಬಲ ಬೆಲೆ ಶೀಘ್ರ ನೀಡುವುದು... ಹೀಗೆ ಕೃಷಿಕರು ತಮ್ಮ ಬಜೆಟ್ ನಿರೀಕ್ಷೆಯನ್ನು ನಮ್ಮ ಜೊತೆ ಹಂಚಿಕೊಂಡರು.
Kshetra Samachara
01/03/2022 08:30 pm