ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಸುಳ್ಯ ತಾಲೂಕು ಕಚೇರಿಗೆ ಭೇಟಿ ನೀಡಿದ ಕೆಎಎಸ್ ಅಧಿಕಾರಿ ಗಿರೀಶ್ ನಂದನ್

ಪುತ್ತೂರು: ಉಪವಿಭಾಗಾಧಿಕಾರಿ ಡಾಕ್ಟರ್ ಯತೀಶ್ ಉಳ್ಳಾಲ್ ರವರ ವರ್ಗಾವಣೆ ಬಳಿಕ ನೂತನವಾಗಿ ಅಧಿಕಾರ ವಹಿಸಿಕೊಂಡ ಕೆಎಎಸ್ ಅಧಿಕಾರಿ ಗಿರೀಶ್ ನಂದನ್ ಎಂ ರವರು ಇಂದು ಸುಳ್ಯ ತಾಲೂಕು ಕಚೇರಿಗೆ ಭೇಟಿ ನೀಡಿ ವಿವಿಧ ಇಲಾಖೆಗಳ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಸುಳ್ಯ ತಹಶೀಲ್ದಾರ್ ಕುಮಾರಿ ಅನಿತಾಲಕ್ಷ್ಮಿ ಅಧಿಕಾರ ವಹಿಸಿಕೊಂಡು ಪ್ರಪ್ರಥಮ ಬಾರಿಗೆ ಸುಳ್ಯಕ್ಕೆ ಆಗಮಿಸಿದ ಎ.ಸಿ.ಗಿರೀಶ್ ನಂದನ್ ಎಂ ರವರನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎ.ಸಿ.ಎ.ಸಿ.ಗಿರೀಶ್,ಇಂದು ಸುಳ್ಯದಲ್ಲಿ ಡಿವಿಜನ್ ಕೋರ್ಟ್ ಕಾರ್ಯಕ್ರಮಕ್ಕೆ ಭಾಗವಹಿಸಿದ್ದು, ರೆವಿನ್ಯೂ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ ನಿರ್ದೇಶನಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.

ಸಂಜೆ 4 ಗಂಟೆಯ ತನಕ ಸುಳ್ಯ ತಾಲೂಕು ಕಚೇರಿಯಲ್ಲಿ ಇದ್ದು ಸಾರ್ವಜನಿಕರಿಗೆ ಏನಾದರೂ ಸಮಸ್ಯೆಗಳಿದ್ದರೆ ಮಾತನಾಡಲು ಅವಕಾಶ ಕಲ್ಪಿಸುವುದಾಗಿ ಹೇಳಿದರು.

ಇದೇ ವೇಳೆ ನಗರ ಪಂಚಾಯಿತಿ ಆವರಣದಲ್ಲಿ ಸಂಗ್ರಹಿಸಿರುವ ಕಸದ ಬಗ್ಗೆ ವರದಿಗಾರರು ಕೇಳಿದಾಗ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು.

Edited By : Manjunath H D
Kshetra Samachara

Kshetra Samachara

12/02/2022 04:09 pm

Cinque Terre

4.4 K

Cinque Terre

0

ಸಂಬಂಧಿತ ಸುದ್ದಿ