ಮೂಡುಬಿದಿರೆ: ಅಫ್ಘಾನಿಸ್ತಾನದ ಕಾಬೂಲ್‌ನಿಂದ ದೇಶಕ್ಕೆ ಭಾನುವಾರ ದೇಶಕ್ಕೆ ಆಗಮಿಸಿದ ಏಳು ಮಂದಿಯಲ್ಲಿ ಮೂಡುಬಿದಿರೆ ಜಗದೀಶ್ ಪೂಜಾರಿ ಎಂಬವರಿದ್ದು, ತನ್ನ ದೇಶಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಳೆದ 10 ವರ್ಷಗಳಿಂದ ಕೆಲಸ ಮಾಡುತ್ತಿರುವ ಜಗದೀಶ್ ಮೂಲತಃ ಹೊಸಂಗಡಿ ಪಡ್ಯಾರಬೆಟ್ಟು ನಿವಾಸಿಯಾಗಿದ್ದು, ವಿವಾಹಿತರಾಗಿ ಇಬ್ಬರು ಮಕ್ಕಳಿದ್ದಾರೆ.
ಭಾರತೀಯ ರಾಯಭಾರಿ ಕಚೇರಿ, ಯುಎಸ್ ಆರ್ಮಿ ಹಾಗೂ ನಾನು ಕಳೆದ 10 ವರ್ಷಗಳಿಂದ ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ ಓಎಸ್ ಎಸ್ ಕಂಪೆನಿಯು ಸುರಕ್ಷಿತವಾಗಿ ನಮ್ಮನ್ನು ಮರಳಿ ದೇಶಕ್ಕೆ ಕರೆತರಲು ತುಂಬಾ ಶ್ರಮವಹಿಸಿದ್ದಾರೆ. ಆಗಸ್ಟ್ 17ರಂದು ದೋಹಾ ಕತಾರ್‌ಗೆ ನಾವು ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ತೆರಳಿದ್ದೇವೆ. ಇಂದು ದೆಹಲಿಗೆ ಬಂದಿದ್ದೇವೆ. ಸುರಕ್ಷಿತವಾಗಿ ತಾಯ್ನಾಡಿಗೆ ತಲುಪುವಂತೆ ಮಾಡಿದ ಭಾರತೀಯ ರಾಯಭಾರಿ ಕಚೇರಿ, ನಮ್ಮ ಕಂಪೆನಿ ಹಾಗೂ ಸಹಕರಿಸಿದ ಎಲ್ಲರಿಗೂ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಜಗದೀಶ್ ಪೂಜಾರಿ ತಿಳಿಸಿದ್ದಾರೆ.
Kshetra Samachara
23/08/2021 07:15 am