ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೊರೋನಾ ವಾರಿಯರ್ಸ್ ಮಹಿಳೆಯರಿಗೆ ಅನ್ಯಾಯ: ವಂಡ್ಸೆಯಲ್ಲಿ ಮಹಿಳೆಯರ ಆಕ್ರೋಶ

ಬೈಂದೂರು: ಜಿಲ್ಲೆಯ ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ವಾರಿಯರ್ಸ್ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಎಸ್ ಎಲ್ ಅರ್ ಎಮ್ ಘಟಕ ಹಾಗೂ ಹೊಲಿಗೆ ಕೇಂದ್ರ ಬಂದ್ ಮಾಡಿರುವ ಹಿನ್ನಲೆಯಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ.

ಗ್ರಾಮ ಪಂಚಾಯತ್ ಕಟ್ಟಡದಲ್ಲಿದ್ದ SLRM ಘಟಕ ಮತ್ತು ಸ್ವಾವಲಂಬಿ ಹೊಲಿಗೆ ಕೇಂದ್ರವನ್ನು ರಾತ್ರೋ ರಾತ್ರಿ ಎತ್ತಂಗಡಿ ಮಾಡಿದ್ದ ಪಂಚಾಯತ್ ವಿರುದ್ಧ ಮಹಿಳೆಯರು ಬೀದಿಗಿಳಿದಿದ್ದಾರೆ.ಹೊಲಿಗೆ ಕೇಂದ್ರದಲ್ಲಿದ್ದ 70 ಮಂದಿ ಸ್ವಾವಲಂಬಿ ಮಹಿಳೆಯರು ಇದೀಗ ಬೀದಿಗೆ ಬಿದ್ದಿದ್ದಾರೆ.ಲಾಕ್ ಡೌನ್ ಟೈಮ್ ನಲ್ಲಿ ಮಾಸ್ಕ್ ಹೊಲಿದು ಕೊರೋನಾ ವಾರಿಯರ್ಸ್ ಆಗಿದ್ದ ಮಹಿಳೆಯರು,ಪಂಚಾಯತ್ ತಮ್ಮ ಕಟ್ಟಡವನ್ನು ತೆರವು ಮಾಡಿದ ಕ್ರಮದ ವಿರುದ್ಧ ಧರಣಿ ಸತ್ಯಾಗ್ರಹ ಮೂಲಕ ಪ್ರತಿಭಟನೆ ನಡೆಸಿದರು.ವಂಡ್ಸೆ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ವಿವಿಧ ಸಂಘ‌ ಸಂಘಟನೆಗಳ ಸಹಭಾಗಿತ್ವದಲ್ಲಿ ಪ್ರತಿಭಟನೆ ನಡೆಯಿತು.

Edited By : Manjunath H D
Kshetra Samachara

Kshetra Samachara

17/10/2020 04:56 pm

Cinque Terre

7.66 K

Cinque Terre

0

ಸಂಬಂಧಿತ ಸುದ್ದಿ