ಕಳೆದ ಕೆಲ ದಿನಗಳಿಂದ ಸುರತ್ಕಲ್ ನಲ್ಲಿ ನಡೆದ ಅಹಿತಕರ ಘಟನೆಗಳನ್ನು ಹತ್ತಿಕ್ಕಲು ಹೊರ ಜಿಲ್ಲೆಯಿಂದ ಬಂದ ಪೊಲೀಸರಿಗೆ ಹಳಸಿದ ಊಟ ಆರೋಪ ಕೇಳಿ ಬಂದಿದ್ದು ಪೊಲೀಸರ ವಾಗ್ವಾದದ ವಿಡಿಯೋ ವೈರಲ್ ಆಗಿದೆ.
ಸುರತ್ಕಲ್ ಬಂಟರ ಭವನದಲ್ಲಿ ಚಿಕ್ಕಮಗಳೂರು ಜಿಲ್ಲೆ ಪೊಲೀಸರಿಗೆ ಹಳಸಿದ ಆಹಾರ ನೀಡಿದ ಆರೋಪ ಕೇಳಿಬಂದಿದ್ದು ಹಳಸಿದ ಆಹಾರ ಸ್ವೀಕರಿಸದೇ ಪೊಲೀಸರು ವಾಪಾಸ್ ಕಳುಹಿಸಿದ್ದಾರೆ.
ಹಳಸಿದ ಆಹಾರ ನೀಡಿದ್ದಕ್ಕೆ ದತ್ತಪೀಠ ಕರ್ತವ್ಯಕ್ಕೆ ಬಂದಾಗ ನೀವು ಹಾಗೆ ಮಾಡಿದ್ದೀರಿ. ಅದಕ್ಕೆ ನಾವು ಹಾಗೆ ಮಾಡುತ್ತಿದ್ದೇವೆ ಎಂಬ ಪ್ರತ್ಯುತ್ತರ ಬಂದಿದೆ ಎಂದು ಹೊರ ಜಿಲ್ಲೆಯ ಪೊಲೀಸರು ಸ್ಥಳೀಯ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದು, ಬಳಿಕ ಸಿಬ್ಬಂದಿ ಬೇರೆ ತಿಂಡಿ ತಂದು ಕೊಟ್ಟು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
PublicNext
03/08/2022 07:28 pm