ಶ್ರೀಗಣೇಶೋತ್ಸವದ ಪ್ರಯುಕ್ತ ವರ್ಣಕುರ ಕಲಾ ಶಿಕ್ಷಣ ಸಂಸ್ಥೆಯು ನಡೆಸುವ ಚಿತ್ರಕಲೆ ಹಾಗೂ ಕರಕುಶಲ ಕಲೆಯ ಪ್ರದರ್ಶನ ಆಗಸ್ಟ್ 27 ಮತ್ತು 28 ರಂದು ಬೆಳಗ್ಗೆ 10.00 ಗಂಟೆಯಿಂದ ಸಾಯಂಕಾಲ 6.00 ಗಂಟೆಯ ಪುತ್ತೂರಿನ ಕಲ್ಲಾರೆಯಲ್ಲಿ ನಡೆಯಲಿದೆ ಎಂದು ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಪ್ರವೀಣ್ ವರ್ಣಕುಟೀರ ಹೇಳಿದರು.
ಪ್ರದರ್ಶನದಲ್ಲಿ ಗಣೇಶನ ನಾನಾ ರೀತಿಯ ಕರಕುಶಲ ಕಲೆ, ಕ್ಲೇ ಮೊಡೆಲಿಂಗ್ ಚಿತ್ರಕಲೆಗಳು ಇರಲಿವೆ. ಸಂಸ್ಥೆಯ ವಿದ್ಯಾರ್ಥಿಗಳು ಮಾಡಿದ ಚಿತ್ರಕಲೆ ಹಾಗೂ ಕ್ಲೇ ಮೊಡೆಲಿಂಗ್ ಕೂಡಾ ಪ್ರದರ್ಶನವಾಗಲಿದೆ ಎಂದ ಅವರು ಪ್ರದರ್ಶನದಲ್ಲಿ ಸುಮಾರು 800 ಹೆಚ್ಚು ಕಲಾಕೃತಿಗಳನ್ನು ಪ್ರದರ್ಶನಗೊಳ್ಳಲಿದ್ದ, ಪುತ್ತೂರಿನಲ್ಲಿ ಪ್ರಥಮ ಬಾರಿಗೆ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಕಲಾ ಪ್ರದರ್ಶನ ನೀಡಲಿದ್ದಾರೆ. ಈ ಸಂಸ್ಥೆಯು 19 ವರ್ಷಗಳಿಂದ ಮಕ್ಕಳಗೆ ಕಲಾ ಶಿಕ್ಷಣವನ್ನು ನೀಡುತ್ತಿದ್ದು, ಇಲ್ಲಿ ಚಿತ್ರಕಲೆ, ಕ್ಲೇ ಮೊಡೆಲಿಂಗ್, ಸುಗಮ ಸಂಗೀತ ಕೀಬೋರ್ಡು ತರಬೇತಿ ನೀಡುತ್ತಾ ಬಂದಿದೆ ಹಾಗೂ ಇದೀಗ ಪ್ಲೇ ಸ್ಕೂಲ್ ನ್ನು ಕೂಡಾ ಆರಂಭಿಸಿದೆ ಎಂದರು.
Kshetra Samachara
24/08/2022 03:19 pm