ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೋಟೆಯನ್ನೇರುವ ನಿಸ್ಸೀಮ ಮಂಗಳೂರು ಪೊಲೀಸ್ ಕಮಿಷನರ್!

ಮಂಗಳೂರು: ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಪೊಲೀಸ್ ಕರ್ತವ್ಯದಲ್ಲಿ ಮಾತ್ರವಲ್ಲ ಹಾಡುಗಾರಿಕೆಯಲ್ಲೂ ನಿಪುಣರು ಎಂದು ಎಲ್ಲರಿಗೂ ತಿಳಿದ ವಿಚಾರ. ಇದೀಗ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಿಂದ ಅವರು ಕೋಟೆಯನ್ನೇರುವುದರಲ್ಲೂ ನಿಸ್ಸೀಮರು ಎಂದು ಸಾಬೀತು ಪಡಿಸಿದ್ದಾರೆ.

ಮೂಲತಃ ಚಿತ್ರದುರ್ಗದವರೇ ಆದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಚಿತ್ರದುರ್ಗದ ಕೋಟೆ, ಇತಿಹಾಸದ ಬಗ್ಗೆ ಬಹಳಷ್ಟು ಆಸಕ್ತಿ ಉಳ್ಳವರು. ಇದೇ ಆಸಕ್ತಿಯಿಂದ ಅವರು ಚಿತ್ರದುರ್ಗದ ಕೋಟೆಯನ್ನು ಏರಿ ಸಾಹಸ ಮೆರೆದಿದ್ದಾರೆ. ಕೋಟೆ ಹತ್ತುವ ಈ ವಿಡಿಯೋವನ್ನು ಪೊಲೀಸ್ ಕಮಿಷನರ್ ಅವರೇ ತಮ್ಮ ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಈ ವಿಡಿಯೋವನ್ನು ಫೇಸ್‌ಬುಕ್‌ಗೆ ಅಪ್ಲೋಡ್ ಆಗಿರುವ 19 ಗಂಟೆಯಲ್ಲಿ 10 ಸಾವಿರ ಮಂದಿ ವೀಕ್ಷಿಸಿದ್ದಾರೆ. 2,000ಕ್ಕೂ ಅಧಿಕ ಲೈಕ್‌ಗಳು ಬಂದಿವೆ‌. 197 ಕಮೆಂಟ್ಸ್ ಗಳು ಬಂದಿವೆ. ಒಟ್ಟಿನಲ್ಲಿ ಪೊಲೀಸ್ ಕಮಿಷನರ್ ಆಗಿ ತಮ್ಮ ಕರ್ತವ್ಯದ ನಡುವೆ ಎನ್.ಶಶಿಕುಮಾರ್ ಅವರು ತಮ್ಮ ಪ್ರವೃತ್ತಿಗಳಿಂದಲೂ ಜನಮೆಚ್ಚುಗೆ ಗಳಿಸಿರೋದು ಅವರ ಆಸಕ್ತಿಗೆ ಹಿಡಿದಿರುವ ಕನ್ನಡಿಯಂತಿದೆ.

Edited By : Somashekar
Kshetra Samachara

Kshetra Samachara

28/06/2022 08:14 pm

Cinque Terre

18.61 K

Cinque Terre

5

ಸಂಬಂಧಿತ ಸುದ್ದಿ