ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಪರ್ಕಳದ ಪಿ.ಕೆ.ಸಿ ಕರಾಟೆ ಕ್ಲಬ್‌ನ ಪ್ರಶಸ್ತಿ ವಿಜೇತ ಮಕ್ಕಳ ಜೊತೆ ಸಂಭ್ರಮಾಚರಣೆ

ಮಣಿಪಾಲ: ಶೈನ್ ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥೆಯ ಮುಖ್ಯಸ್ಥ ಲಕ್ಷ್ಮೇಶ್ವರ್ ಗದಗ ಜಿಲ್ಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಪರ್ಕಳ ಕರಾಟೆ ಕ್ಲಬ್‌ನ ವಿದ್ಯಾರ್ಥಿಗಳು 15 ಚಿನ್ನದ ಪದಕ ಹಾಗೂ ನಾಲ್ಕು ಬೆಳ್ಳಿಯ ಪದಕಗಳನ್ನು ಗೆದ್ದಿದ್ದಾರೆ.

ಖ್ಯಾತ ಉದ್ಯಮಿ ಕಿರುತೆರೆಯ ನಟಿ ಹಾಗೂ ಸಮಾಜಸೇವಕಿ ಪರ್ಕಳದ ಅಮಿತಾ ಆರ್ ಹೆಗ್ಡೆ ವಿಜೇತ ಮಕ್ಕಳಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು. ಕರಾಟೆ ಕ್ಲಬ್‌ನ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ತಮ್ಮ ಮನೆಗೆ ಕರೆಸಿ ವಿದ್ಯಾರ್ಥಿಗಳ ಜೊತೆಗೆ ಊಟ ಉಪಚಾರ ನಡೆಸಿ ತಮ್ಮೂರಿಗೆ ಪ್ರಶಸ್ತಿ ತಂದ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಕರೆಸಿ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದರು.

ಇದೇ ಸಂದರ್ಭ ತರಬೇತುದಾರರನ್ನ ಗೌರವಿಸಲಾಯಿತು. ಪ್ರಶಸ್ತಿ ವಿಜೇತ ಮಕ್ಕಳ ಜೊತೆ ಭೋಜನ ಸವಿದು, ಕರಾಟೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ತಂಡದ ತರಬೇತುದಾರರಾದ ಪ್ರವೀಣ ಸುವರ್ಣ ಪರ್ಕಳ ಪೋಷಕರಾದ ಲಕ್ಷ್ಮಿ, ಸುನೀತ, ಝೀನತ್, ನಾಗವೇಣಿ, ಪ್ರೀತಿ, ಮಹೇಶ್ ಮಣಿಪಾಲ್, ಗಣೇಶ್ ಗಣೇಶ್ ಶೆಟ್ಟಿ ಕೀಳಂಜೆ ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

Edited By : Somashekar
Kshetra Samachara

Kshetra Samachara

02/08/2022 01:05 pm

Cinque Terre

5.63 K

Cinque Terre

1

ಸಂಬಂಧಿತ ಸುದ್ದಿ