ಬೆಳ್ತಂಗಡಿ: ಬಟ್ಟೆಯೊಂದನ್ನು ನಾಗರಹಾವು ನುಂಗಿದ್ದು ನಂತರ ಸ್ನೇಕ್ ಅಶೋಕ್ ಅವರು ಬಟ್ಟೆಯನ್ನು ಹೊರತೆಗೆದು ಹಾವನ್ನು ಕಾಡಿಗೆ ಬಿಟ್ಟ ವಿಚಿತ್ರ ಘಟನೆ ಬೆಳ್ತಂಗಡಿಯ ಕಳೆಂಜದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಶಾಲೆತಡ್ಕ ನಿವಾಸಿ ಅಶೋಕ್ ಪೂಜಾರಿ ಎಂಬುವರ ಮನೆಯ ಕೊಟ್ಟಿಗೆಯ ಬದಿಯಲ್ಲಿ ಸುಮಾರು 4 ಅಡಿ ಉದ್ದದ ನಾಗರ ಹಾವು ಬಟ್ಟೆಯೊಂದನ್ನು ನುಂಗಿತ್ತು. ಇದನ್ನು ಗಮನಿಸಿದ ಮನೆಯವರು ಸ್ನೇಕ್ ಅಶೋಕ್ ಲಾಯಿಲ ಇವರಿಗೆ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕ್ಕೆ ಬಂದು ನಾಗರಹಾವನ್ನು ಹಿಡಿದು ನುಂಗಿದ್ದ ಬಟ್ಟೆಯನ್ನು ಹೊರತೆಗೆದು ನಂತರ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
Kshetra Samachara
27/06/2022 12:19 pm