ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ದಸರಾಕ್ಕೆ ವಿದ್ಯುತ್ ದೀಪಾಲಂಕೃತಗೊಂಡ ಕಡಲ ನಗರಿ ಕುಡ್ಲ

ಮಂಗಳೂರು: ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಮಂಗಳೂರು ದಸರಾದ ಸಂಭ್ರಮ ಈಗಾಗಲೇ ಕಳೆಗಟ್ಟಿದೆ. ಇಡೀ ಮಂಗಳೂರು ನಗರಿಯೇ ವಿದ್ಯುತ್ ದೀಪಾಲಂಕೃತಗೊಂಡು ಶೋಭಾಯಮಾನವಾಗಿ ಬೆಳಗುತ್ತಿದೆ.

ಶ್ರೀ ಕ್ಷೇತ್ರ ಕುದ್ರೋಳಿಯಿಂದ ಆಯೋಜನೆಗೊಳ್ಳುತ್ತಿರುವ ಈ ಮಂಗಳೂರು ದಸರಾ ಹಿನ್ನೆಲೆಯಲ್ಲಿ ಕುದ್ರೋಳಿ ದೇವಸ್ಥಾನದಿಂದ ಹಿಡಿದು ಮಂಗಳೂರಿನ ಪ್ರಮುಖ ರಸ್ತೆಗಳೆಲ್ಲವೂ ಸಂಪೂರ್ಣ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ರಾತ್ರಿಯಾಗುತ್ತಿದ್ದಂತೆ ಇಡೀ ನಗರವೇ ಬೆಳಕಿನ ಲೋಕದಂತೆ ಬೆಳಗುತ್ತಿದೆ‌. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವು ಸಂಪೂರ್ಣ ವಿದ್ಯುತ್ ದೀಪಾಲಂಕೃತಗೊಂಡು ಭಕ್ತರ, ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ಮಂಗಳೂರು ದಸರಾ ಹಿನ್ನೆಲೆ ಶಾರದಾ ಮಾತೆಯ ಶೋಭಾಯಾತ್ರೆ ಸಾಗುವ ರಾಜಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆಯನ್ನು ಕಳೆದ ವರ್ಷದಿಂದ ಮಂಗಳೂರು ಮನಪಾ ವಹಿಸಿಕೊಂಡಿದೆ. ಈ ಬಾರಿಯೂ ದಾರಿಯುದ್ದಕ್ಕೂ 92 ಲಕ್ಷ ರೂ‌. ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿದೆ. ಅಲ್ಲದೆ ರಸ್ತೆಯ ಇಕ್ಕೆಲಗಳಲ್ಲಿರುವ ವಾಣಿಜ್ಯ ಸಂಕೀರ್ಣಗಳು ವಿದ್ಯುತ್ ದೀಪಾಲಂಕೃತಗೊಂಡು ಕಂಗೊಳಿಸುತ್ತಿದೆ. ಒಟ್ಟಿನಲ್ಲಿ ಇಡೀ ಮಂಗಳೂರು ನಗರಿ ದಸರಾದ 10 ದಿನಗಳ ಕಾಲ ಧರೆಗಿಳಿದ ಬೆಳಕಿನ ಲೋಕದಂತೆ ಕಂಗೊಳಿಸುತ್ತದೆ.

Edited By : Somashekar
Kshetra Samachara

Kshetra Samachara

28/09/2022 08:24 pm

Cinque Terre

7.01 K

Cinque Terre

2

ಸಂಬಂಧಿತ ಸುದ್ದಿ