ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹುಲಿವೇಷಧಾರಿಗಳ ಜೊತೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು..

ಉಡುಪಿ: ನಿನ್ನೆಯಿಂದ ಕೃಷ್ಣನೂರು ಉಡುಪಿಯ ಮೂಲೆ ಮೂಲೆಗಳಲ್ಲಿ ಹುಲಿ ವೇಷಧಾರಿಗಳ ಕುಣಿತದ್ದೇ ಸದ್ದು. ಉಡುಪಿಯಾದ್ಯಂತ ಇಪ್ಪತ್ತಕ್ಕೂ ಹೆಚ್ಚು ತಂಡಗಳು ನಗರದೆಲ್ಲೆಡೆ ಸಂಚರಿಸುತ್ತಿವೆ. ಹುಲಿ ಕುಣಿತದ ತಾಸೆ ಸದ್ದು ಕೇಳಿದರೆ ಪುಟ್ಟ ಮಕ್ಕಳೂ ಕುಣಿಯುತ್ತಾರೆ.ಅಷ್ಟೊಂದು ಕ್ರೇಝ್ ಇಲ್ಲಿದೆ.

ವರ್ಷಂಪ್ರತಿ ಮಣಿಪಾಲ ವಿಶ್ವ ವಿದ್ಯಾನಿಲಯದ ಮುಂದೆ ಹುಲಿ ಕುಣಿತ ಪ್ರದರ್ಶನ ಏರ್ಪಡಿಸಲಾಗುತ್ತದೆ. ಈ ಬಾರಿ ,ಅಶೋಕ್‌ ಕಾಡುಬೆಟ್ಟು ಬಳಗದವರ ಹುಲಿ ಕುಣಿತ ನೆರೆದ ಸಾವಿರಾರು ವಿದ್ಯಾರ್ಥಿಗಳನ್ನು ರೋಮಾಂಚನಕ್ಕೀಡು ಮಾಡಿತು. ಯೂನಿವರ್ಸಿಟಿ ಸಹಕುಲಾಧಿಪತಿ ಡಾ. ಎಚ್‌. ಎಸ್‌. ಬಲ್ಲಾಳ್‌, ಅವರು ತಾಸೆಯನ್ನು ಬಾರಿಸುವ ಮೂಲಕ ಹುಲಿ ಕುಣಿತಕ್ಕೆ ಚಾಲನೆ ನೀಡಿದರು.

ಬಳಿಕ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಹುಲಿ ವೇಷಧಾರಿಗಳ ವಿಶಿಷ್ಟ ಶೈಲಿಯ ಹುಲಿ ಕುಣಿತ ಮಾಡಿ ನೆರೆದ ಯುವ ಸಮೂಹವನ್ನು ರೋಮಾಂಚನಗೊಳಿಸಿದವು. ಅದರಲ್ಲೂ ಪುಟ್ಟ ಬಾಲಕನ ಹುಲಿ ವೇಷದ ಕುಣಿತಕ್ಕೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಕೊನೆಗೆ ಮಣಿಪಾಲ ವಿದ್ಯಾರ್ಥಿಗಳು ಕೂಡ ಹುಲಿ ವೇಷಧಾರಿಗಳ ಜೊತೆಗೆ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ರು.

Edited By : Somashekar
Kshetra Samachara

Kshetra Samachara

20/08/2022 02:52 pm

Cinque Terre

5.19 K

Cinque Terre

0

ಸಂಬಂಧಿತ ಸುದ್ದಿ