ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಕಟ್ಟದಪ್ಪ ಸೇವೆ

ಕಾಪು : ಪಡುಬಿದ್ರಿಯ ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಇಂದು(ಶನಿವಾರ) ವಿಶೇಷ ಕಟ್ಟದಪ್ಪ ಸೇವೆ ಜರುಗಿತು.

ಬೇರೆ ಜಿಲ್ಲೆಗಳಿಂದಷ್ಟೇ ಅಲ್ಲದೇ ದೇಶ ವಿದೇಶಗಳ ಭಕ್ತರು ಈ ಸೇವೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅಷ್ಟಕ್ಕೂ ಈ ಸೇವೆಯ ಹಿಂದೆ ಒಂದು ಕಥೆಯೂ ಇದೆ. ಪಡುಬಿದ್ರಿ ಗ್ರಾಮದ ಕಲ್ಲಟ್ಟೆ ಎಂಬ ಪ್ರದೇಶದಲ್ಲಿ ಕೃಷಿಕರು ಎಷ್ಟೇ ಪ್ರಯತ್ನ ಪಟ್ಟರೂ, ಕಾಮಿನಿ ಹೊಳೆಗೆ ಕಟ್ಟಿದ ಕಟ್ಟ(ದಂಡೆ) ನಿಲ್ಲದೆ ನೀರಿನ ರಭಸಕ್ಕೆ ಕೊಚ್ಚಿ ಹೋಗ್ತಿತ್ತು. ಕೊನೆಗೆ ಗ್ರಾಮದ ದೇವರಿಗೆ ಕಟ್ಟ ನಿಲ್ಲುವಂತೆ ಹರಕೆ ಹೇಳಿಕೊಂಡ್ರು. ಅದೇ " ಕಟ್ಟದಪ್ಪ" ಹರಕೆ. ಹರಕೆಯ ಬಳಿಕ ಯಾವುದೇ ಸಮಸ್ಯೆ ಇಲ್ಲದಂತೆ ಹಾಕಲಾದ ತಡೆ ನಿಲ್ಲುತ್ತಿದ್ದು, ಈಗಲೂ ಆ ಆಚರಣೆ ರೂಢಿಯಲ್ಲಿದೆ.

ಇನ್ನು ಈ ಬಾರಿ 100 ಮುಡಿ ಅಕ್ಕಿ ಹಿಟ್ಟು, 1500 ತೆಂಗಿನ ಕಾಯಿ,3500ಬಾಳೆ ಹಣ್ಣು, 3700 ಕೆಜಿ ಬೆಲ್ಲ, 30 ಗೋಣಿ ಚೀಲ ಅರಳು, 15 ಕೆಜಿ ಏಲಕ್ಕಿ ಮತ್ತು 80 ಟಬ್ಬಿ ಕೊಬ್ಬರಿ ಎಣ್ಣೆ ಬಳಸಿ ಈ ಕಟ್ಟದಪ್ಪ ತಯಾರಿಸಲಾಗುತ್ತದೆ.

Edited By : Somashekar
Kshetra Samachara

Kshetra Samachara

06/08/2022 08:02 pm

Cinque Terre

7.48 K

Cinque Terre

0

ಸಂಬಂಧಿತ ಸುದ್ದಿ