ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು : ಅಖಂಡ ಭಾರತ ನಿರ್ಮಾಣ ನಮ್ಮ ಕನಸು : ಹಾರಿಕಾ ಮಂಜುನಾಥ.

ಬೈಂದೂರು : ಹಿಂದೂ ಜಾಗರಣ ವೇದಿಕೆ ವತಿಯಿಂದ ಜನಜಾಗೃತೆಗಾಗಿ ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಶುಕ್ರವಾರ ಬೈಂದೂರು ಸೇನೇಶ್ವರ ದೇವಸ್ಥಾನದಿಂದ ಹೊರಟು ನಾಕಟ್ಟೆ ಮಾರ್ಗವಾಗಿ ಆಂಜನೇಯ ದೇವಸ್ಥಾನದವರೆಗೆ ಪಂಜಿನ ಮೆರವಣಿಗೆ ನಡೆಯಿತು.

ಪಂಜಿನ ಮೆರವಣಿಗೆಯ ಉದ್ದೇಶಿಸಿ ಮಾತನಾಡಿ ಬಾಲವಾಗ್ಮೀ ಕುಮಾರಿ ಹಾರಿಕಾ ಮಂಜುನಾಥ ಅವರು ಅಖಂಡ ಭಾರತ ನಿರ್ಮಾಣ ನಮ್ಮ ಕನಸೇನೋ ಹೌದು. ಈ ಕನಸಿನ ಮೂಲಕ ಮಡಿದ ನಮ್ಮ ಹಿರಿಯರ ಆಶಯಗಳನ್ನು ಈಡೇರಿಸುವುದು ನಮ್ಮ ಕಾಯಕವಾಗಬೇಕು ಎಂಬುದನ್ನು ಒಪ್ಪಿಕೊಳ್ಳಲೇ ಬೇಕು.

ಏಕೆಂದರೆ 1947 ರ ಮೊದಲಿನ ಪರಿಸ್ಥಿತಿಯೂ ಈಗ ಭಾರತದಲ್ಲಿಲ್ಲ. ಜೊತೆಗೆ ಭಾರತ ಪಾಕಿಸ್ತಾನಗಳೆರಡೂ ಆಜನ್ಮ ಶತ್ರುಗಳೆಂದೇ ಬಿಂಬಿಸಿಕೊಂಡಿದೆ .

ಗಂಟಿಹೊಳೆ ವಕೀಲ ವಿಶ್ವನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಉಮೇಶ್ ಸೂಡಾ, ಹಿಂದೂ ಜಾಗರಣ ವೇದಿಕೆ ಬೈಂದೂರು ಸಂಚಾಲಕ ರಾಜೇಶ್ ಆಚಾರ್ ವೇದಿಕೆಯಲ್ಲಿ ಉಪಸ್ಥಿದರಿದ್ದರು.

Edited By : Somashekar
Kshetra Samachara

Kshetra Samachara

13/08/2022 03:08 pm

Cinque Terre

5.49 K

Cinque Terre

0

ಸಂಬಂಧಿತ ಸುದ್ದಿ