ಕೋಟ: ಕಡಲ ತೀರದ ಭಾರ್ಗವ, ಡಾ. ಕೋಟ ಶಿವರಾಮ ಕಾರಂತರ ಆದರ್ಶ ಮತ್ತು ಮಾರ್ಗದರ್ಶನದ ಅಂಶಗಳನ್ನು ಒಳಗೊಂಡ 'ಸುಗಂಧಿ' ಚಲನಚಿತ್ರವು ಕೋಟೇಶ್ವರದ ಭಾರತ್ ಸಿನೆಮಾದಲ್ಲಿ ಪ್ರದರ್ಶನಗೊಂಡಿತು. ಕೋಟದ ಸಮಾನ ಮನಸ್ಕ ಆಸಕ್ತರು ಕೂಡಿ ನಿರ್ಮಿಸಿದ ಚಿತ್ರದ ಪ್ರೀಮಿಯರ್ ಶೋ ವನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಶುಭ ಹಾರೈಸಿದರು.
ಸುಗಂಧಿ ಎನ್ನುವ ಬಾಲಕಿಯ ಸುತ್ತ ನಡೆಯುವ ಕಥೆ ಚಿತ್ರದಲ್ಲಿ ಅಳವಡಿಸಲಾಗಿದ್ದು, ಹಿರಿಯ ನಿರ್ದೇಶಕ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೋಟದ ನರೇಂದ್ರ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಹಿರಿಯ ನಟಿ ವಿನಯಪ್ರಸಾದ್, ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ, ಬಾಲ ಕಲಾವಿದೆ ವೈಷ್ಣವಿ ಅಡಿಗ, ರಘು ಪಾಂಡೇಶ್ವರ ಮತ್ತಿತರರು ಕಾಣಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ನೆನಪು ಮೂವಿ ನಿರ್ದೇಶಕ ಹಾಗೂ ಶಿಕ್ಷಕ ನರೇಂದ್ರ ಕುಮಾರ್ ಕೋಟ, ಬಾಲ ಕಲಾವಿದೆ ವೈಷ್ಣವಿ ಅಡಿಗ, ಕಾರಂತ ಪ್ರತಿಷ್ಠಾಪನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
28/06/2022 02:42 pm