ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ವಿವಿ 2 ಎಕರೆ ಜಾಗವನ್ನು ಖಾಸಗಿಗೆ ಪರಭಾರೆ ಮಾಡಿರುವುದನ್ನು ವಾಪಸ್ ಕೊಡಿ

ಮಂಗಳೂರು: ನಗರದ ಕೊಣಾಜೆಯಲ್ಲಿರುವ ಮಂಗಳೂರು ವಿವಿಯ ಅಧೀನದಲ್ಲಿರುವ ಎರಡು ಎಕರೆಯಷ್ಟು ಜಾಗವನ್ನು ಸರಕಾರ ಖಾಸಗಿ ಚ್ಯಾರಿಟೇಬಲ್ ಟ್ರಸ್ಟ್ ಒಂದಕ್ಕೆ ಪರಭಾರೆ ಮಾಡಿರುವುದು ಅಕ್ಷಮ್ಯ. ತಕ್ಷಣ ಈ ಜಮೀನನ್ನು ವಿವಿಗೆ ಕೊಡಬೇಕೆಂದು ಸರ್ವ ಕಾಲೇಜು ಮಂಗಳೂರು ನಗರಾಧ್ಯಕ್ಷ ಮೊಹಮ್ಮದ್ ಆದಿಲ್ ಅಮೀನ್ ಆಗ್ರಹಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಮಹಿಳಾ ಹಾಸ್ಟೆಲ್ ಹಾಗೂ ಒಳಾಂಗಣ ಕ್ರೀಡಾಂಗಣದ ಮಧ್ಯ ಭಾಗದಲ್ಲಿರುವ ಈ ಜಮೀನನ್ನು ಖಾಸಗಿ ಚ್ಯಾರಿಟೇಬಲ್ ಟ್ರಸ್ಟ್‌ಗೆ ಪರಭಾರೆ ಮಾಡಲು ಹೊರಟಿರೋದು ವಿವಿಯ ಬೆಳವಣಿಗೆಗೆ ಹೊಡೆತ ನೀಡಿದಂತಾಗುತ್ತದೆ ಎಂದು ಹೇಳಿದರು.

ಈ ಜಮೀನಿನಲ್ಲಿ ಮಂಗಳೂರು ವಿವಿಯು ಪರೀಕ್ಷಾ ಭವನ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಸಿತ್ತು. ಆದ್ದರಿಂದ ಮಂಗಳೂರು ವಿವಿಯ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಮನಗಂಡು ಚ್ಯಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಈ ಜಮೀನನ್ನು ವಿವಿಗೆ ಬಿಟ್ಟುಕೊಡುವ ಔದಾರ್ಯ ತೋರಬೇಕೆಂದು ಅವರು ಕಳಕಳಿಯ ಮನವಿ ಮಾಡಿದರು.

Edited By : Manjunath H D
Kshetra Samachara

Kshetra Samachara

08/10/2022 07:20 pm

Cinque Terre

3.33 K

Cinque Terre

0

ಸಂಬಂಧಿತ ಸುದ್ದಿ