ಮಂಗಳೂರು: ಮಂಗಳೂರು ವಿ.ವಿ.ಯು ವಿದ್ಯಾರ್ಥಿಗಳ ಸೆಮಿಸ್ಟರ್ ಫಲಿತಾಂಶವನ್ನು ಸರಿಯಾಗಿ ನೀಡದೆ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಹಾಗೂ ಮರು ಮೌಲ್ಯಮಾಪನಕ್ಕೆ ತೊಂದರೆಪಡಿಸುತ್ತಿದೆ. ಆದ್ದರಿಂದ ಬೇಜವಾಬ್ದಾರಿ ಪರೀಕ್ಷಾ ಕುಲ ಸಚಿವರು ತಕ್ಷಣ ರಾಜೀನಾಮೆ ನೀಡಲಿ ಎಂದು ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಆಗ್ರಹಿಸಿದ್ದಾರೆ.
ಫಲಿತಾಂಶದ ಬಳಿಕ ವಿದ್ಯಾರ್ಥಿಗಳಿಗೆ ತಮ್ಮ ಅಂಕದಲ್ಲಿ ಸಂಶಯವಿದ್ದಲ್ಲಿ ಅಥವಾ ಅನುತ್ತೀರ್ಣರಾದಲ್ಲಿ ಮರುಮೌಪಲ್ಯಮಾಪನಕ್ಕೆ ಅವಕಾಶ ಇರುತ್ತದೆ. ಆದರೆ ಫಲಿತಾಂಶವೇ ಹೊರಬರದೇ ಇರುವುದರಿಂದ ಹಾಗೂ ಮರುಮೌಪಲ್ಯಮಾಪನ ದಿನಾಂಕ ಮುಕ್ತಾಯವಾಗಿದ್ದು, ಪರಿಣಾಮ ವಿದ್ಯಾರ್ಥಿಗಳ ಒಂದು ವರ್ಷವೇ ವ್ಯರ್ಥವಾಗುತ್ತದೆ. ಇಂತಹ ಪರಿಸ್ಥಿತಿ ಪರೀಕ್ಷಾಂಗ ಕುಲಸಚಿವರ ಮನೆಯವರಿಗೆ ಆಗಿದ್ದರೆ ಬಾಯಿ ಮುಚ್ಚಿ ಕೂರುತ್ತಿದ್ದರೆ ಎಂದು ಪ್ರಶ್ನಿಸಿದ್ದಾರೆ.
ಫಲಿತಾಂಶದಲ್ಲಿ ತೊಂದರೆಯಾದಾಗ ವಿದ್ಯಾರ್ಥಿಗಳು ಕರೆ ಮಾಡಿದಾಗ ಪ್ರಾಧ್ಯಾಪಕರ ಮೇಲೆ ದೂರು ಹೊರಿಸುವುದೇಕೆ? ಎನ್ಇಪಿ ಪ್ರಥಮ ಸೆಮಿಸ್ಟರ್ ಕೊಡಿಂಗ್ ಕೆಲಸ ಇನ್ನು ಮುಗಿದಿಲ್ಲ. ಅದರ ಮೌಲ್ಯಮಾಪನಕ್ಕೆ ಎಷ್ಟು ಸಮಯ ಬೇಕು? ರಾಜ್ಯ ಸರ್ಕಾರದ ಯುಯುಸಿಎಂಎಸ್ ಸಾಫ್ಟ್ ವೇರ್ ನಲ್ಲಿ ಇತರ ವಿಶ್ವವಿಧ್ಯಾನಿಲಯಗಳು ಫಲಿತಾಂಶ ನೀಡಿದಾಗ ಮಂಗಳೂರು ವಿ. ವಿ. ಯಾಕೆ ಇದು ಸಾಧ್ಯವಿಲ್ಲ? ಫಲಿತಾಂಶ ವಿಳಂಬದಿಂದ ಎಷ್ಟೋ ಮಕ್ಕಳಿಗೆ ಉನ್ನತ ಶಿಕ್ಷಣ ಗಗನ ಕುಸುಮವಾಗಿದೆ. ಇದಕ್ಕೆ ಹೊಣೆ ಯಾರು? ಮಾರ್ಕ್ಸ್ ಕಾರ್ಡ್ ದೊರಕದೆ ಉನ್ನತ ಶಿಕ್ಷಣಕ್ಕೆ ಬಹಳಷ್ಟು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಪರೀಕ್ಷಾಂಗ ಕುಲಸಚಿವರೇ? ಇದಕ್ಕೆಲ್ಲಾ ಪರಿಹಾರರ್ಥವಾಗಿ ಎಲ್ಲಾ ಸೆಮಿಸ್ಟರ್ ಗಳಿಗೆ ಸಪ್ಲಿಮೆಂಟರಿ ಪರೀಕ್ಷೆ ಮಾಡಬೇಕು ಎಂದು ಸವಾದ್ ಸುಳ್ಯ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Kshetra Samachara
09/09/2022 09:58 pm