ಕುಂದಾಪುರ: ಇಲ್ಲಿನ ಸೈಂಟ್ ಮೇರಿಸ್ ಸಮೂಹ ಸಂಸ್ಥೆಯ ಸೈಂಟ್ ಮೇರಿಸ್ ಪ್ರೌಢಶಾಲೆ, ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ, ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜ್,ಹೋಲಿ ರೋಜರಿ ಆ.ಮಾ.ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆಶ್ರಯದಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಕುಂದಾಪುರದ ಡಿ.ವೈ.ಎಸ್ಪಿ. ಶ್ರೀಕಾಂತ ಕೆ ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಮೂಹ ಸಂಸ್ಥೆಯ ಅಧ್ಯಕ್ಷ ಅತೀ ವಂ.ಫಾ.ಸ್ಟ್ಯಾನಿ ತಾವೋ ವಹಿಸಿದ್ದರು.ಆಡಳಿತ ಮಂಡಳಿಯ ಉಪಾಧ್ಯಕ್ಷ ಲೂಯಿಸ್ ಜೆ.ಪೆನಾರ್ಡಿಸ್ ಹೋಲಿ ರೋಜರಿ ಆ.ಮಾ.ಶಾಲೆ ಮುಖ್ಯ ಶಿಕ್ಷಕಿ ಸಿಸ್ಟರ್ ತೆರೆಜಾ ಶಾಂತಿ, ಫೇ ಸ್ಕೂಲ್ ಮುಖ್ಯ ಶಿಕ್ಷಕಿ ಶೈಲಾ ಲೂಯಿಸ್, ಸೈಂಟ್ ಮೇರಿಸ ಹಿ.ಪ್ರಾ.ಮುಖ್ಯ ಶಿಕ್ಷಕಿ ಡೋರಾ ಸುವಾರಿಸ್ ಮೊದಲಾದವರು ಉಪಸ್ಥಿತರಿದ್ದರು
ಸೈಂಟ್ ಮೇರಿಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ ಸ್ವಾಗತಿಸಿದರು.ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಶುಂಪಾಲೆ ರೇಷ್ಮಾ ಫರ್ನಾಂಡೀಸ್ ವಂದಿಸಿದರು.ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
ಹರ್ ಘರ್ ತಿರಂಗಾ ಕಾರ್ಯಕ್ರಮದ ಅಂಗವಾಗಿ ಸೈಂಟ್ ಮೇರಿಸ್ ಸಮೂಹ ಸಂಸ್ಥೆಯ ಸುಮಾರು 1000ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರಭಾತ್ ಫೇರಿ ಮೆರವಣಿಗೆ ಕುಂದಾಪುರ ನಗರದ ಮುಖ್ಯ ರಸ್ತೆಯಲ್ಲಿ ನಡೆಸಿ ಸಾರ್ವಜನಿಕ ಗಮನ ಸೆಳೆದರು. ಮೆರವಣಿಯಲ್ಲಿ ಆಕರ್ಷಕ ಬ್ಯಾಂಕ್, ಸ್ವಾತಂತ್ರ್ಯ ಹೋರಾಟಗಾರ ವೇಷಭೂಷಣ, ಬೃಹತ್ ರಾಷ್ಟ್ರಧ್ವಜ ಎಲ್ಲರ ಗಮನಸೆಳೆಯಿತು.
Kshetra Samachara
13/08/2022 08:56 pm