ಬೈಂದೂರು: ಸರಯೂ ಬಾಲ ಯಕ್ಷ ವೃಂದದ 2022-23ನೇ ಸಾಲಿನ ವಿದ್ಯಾರ್ಥಿಗಳ ಮುಖವರ್ಣಿಕಾ ಶಿಬಿರವು ಮಂಗಳೂರಿನ ಸರಯೂನಲ್ಲಿ ನಡೆಯಿತು.
ಯಕ್ಷಗುರು, ಬಸವರತ್ನ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ರವಿ ಅಲೆವೂರಾಯರು ಮಾರ್ಗದರ್ಶನವಿತ್ತರು. ಯಕ್ಷಗಾನ ಕಲಾವಿದರಾದ ವಿಜಯಲಕ್ಷ್ಮೀ ನಿಡ್ವಣ್ಣಾಯ, ಅಕ್ಷಯ್ ಸುವರ್ಣ, ಮುಲ್ಲಕಾಡು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೂ, ದಾಖಲೆಯ ಈಜುಪಟು ನಾಗರಾಜ ಖಾರ್ವಿ ಉಪಸ್ಥಿತರಿದ್ದರು.
ಇಪ್ಪತ್ತೈದಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು. ಶಿಬಿರದಲ್ಲಿ ಆರು ವರ್ಷದ ಮಕ್ಕಳಿಂದ ಹಿಡಿದು 18 ವರ್ಷದವರೆಗಿನ ಯಕ್ಷ ಕಲಿಕಾರ್ಥಿಗಳು ಭಾಗವಹಿಸಿದ್ದರು. ರವಿ ಅಲೆವೂರಾಯರು ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಯಕ್ಷಗಾನ ಅಭಿರುಚಿ ಮೂಡಿಸಿ ಯಕ್ಷಗಾನವನ್ನು ಕಲಿಸುತ್ತಾ ಬಂದಿರುತ್ತಾರೆ. ಚಿಟ್ಟೆಪಟ್ಟಿ ಕಟ್ಟುವ ವಿಧಾನ, ಬಣ್ಣ ಕಲಸುವ ರೀತಿ, ಅದಕ್ಕೆ ಬಿಳಿ– ಹಳದಿ – ಕೆಂಪುಗಳ ಪ್ರಮಾಣ, ಮುಖಕ್ಕೆ ಬಳಿದುಕೊಳ್ಳುವುದು, ಪೌಡರ್ ಹಾಕಿಕೊಳ್ಳುವುದು, ಎಣ್ಣೆಮಸಿಯನ್ನು ಬಳಸಿ ಕಣ್ಣು – ಹುಬ್ಬು ಬರೆಯುವುದು, ಹಣೆಗೆ ತಿಲಕ, ಬಿಳಿ ಬಣ್ಣ ಬರೆಯುವುದು, ಮುದ್ರೆ ಹಾಕಿಕೊಳ್ಳುವುದು ಮುಂತಾದವುಗಳ ಬಗ್ಗೆ ತರಬೇತಿ ನೀಡಿದರು.
Kshetra Samachara
08/07/2022 09:38 pm