ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ವತಿಯಿಂದ ಮೀಫ್ ಸದಸ್ಯ ಶಾಲೆಗಳ ಸಹಿತ ದಕ್ಷಿಣ ಕನ್ನಡ
ಮತ್ತು ಉಡುಪಿ ಜಿಲ್ಲೆಯ ಎಸ್ಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯ ರಾಜ್ಯ ಮಟ್ಟದ ಟಾಪರ್‌ಗಳಿಗೆ ಮೀಫ್ ಎಕ್ಸಲೆನ್ಸ್ ಪ್ರಶಸ್ತಿ -2022 ಪ್ರದಾನ ಕಂಕನಾಡಿಯ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ ಐಎಎಸ್ ಓರಿಯೆಂಟೇಶನ್ ಯೋಜನೆಗೆ ಚಾಲನೆ ನೀಡಲಾಯಿತು. ಅಲ್ಲದೆ, ಗುಲ್ಬರ್ಗಾ ವಿವಿ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಯೆನೆಪೋಯ ಪರಿಗಣಿತ ವಿವಿ ಕುಲಪತಿ ಡಾ.ವೈ.ಅಬ್ದುಲ್ಲಾ ಕುಂಞಿ ಅವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್, 'ಸಕಾರಾತ್ಮಕ ಚಿಂತನೆಯಿಂದ ಒಗ್ಗೂಡಿ ಕೆಲಸ ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ 'ಮೀಫ್' ಸಾಕ್ಷಿಯಾಗಿದೆ. ಮಾಜಿ ಶಿಕ್ಷಣ ಸಚಿವ ಬಿ.ಎ. ಮೊಯ್ದಿನ್ ಅವರ ಕನಸಿನ ಕೂಸಾದ 'ಮೀಫ್' ಸಹಕಾರದಿಂದ ಸಮುದಾಯದಲ್ಲಿ ಶೈಕ್ಷಣಿಕ ಕ್ರಾಂತಿ ಸೃಷ್ಟಿಯಾಗಿದೆ ಎಂದರು.
ʼಮೀಫ್' ಗೌರವಾಧ್ಯಕ್ಷ ಉಮರ್ ಟೀಕೆ ದಿಕ್ಸೂಚಿ ಭಾಷಣ ಮಾಡಿದರು. ಗೌರವ ಸಲಹೆಗಾರ ಸೈಯದ್ ಮುಹಮ್ಮದ್ ಬ್ಯಾರಿ
ಮೀಫ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಮಾಡಿದರು. ಅಧ್ಯಕ್ಷತೆ ವಹಿಸಿದ್ದ 'ಮೀಫ್' ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಪ್ರಾಸ್ತಾವಿಕ ಮಾತನಾಡಿದರು. ದ.ಕ. ಜಿಲ್ಲಾ ಡಿಡಿಪಿಯು ಸಿ.ಡಿ.ಜಯಣ್ಣ, ದ.ಕ. ಜಿಲ್ಲಾ ಡಿಡಿಪಿಐ ಕೆ. ಸುಧಾಕರ್, ಏಸ್ ಐಎಎಸ್ ಅಕಾಡೆಮಿ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್, ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಮುಖ್ಯ ಅತಿಥಿಗಳಾಗಿದ್ದರು.
ಮೀಫ್ ಪದಾಧಿಕಾರಿಗಳಾದ ಬಿ.ಎ. ನಝೀರ್ ಕೃಷ್ಣಾಪುರ, ಶಬಿ ಖಾಝಿ ಉಡುಪಿ, ಮುಸ್ತಫಾ ಸುಳ್ಯ, ನಿಸಾರ್ ಫಕೀರ್ ಮುಹಮ್ಮದ್, ಮೀಫ್ ಉಪಾಧ್ಯಕ್ಷ ಬಿ.ಎಂ. ಮುಮ್ತಾಝ್ ಅಲಿ, ಬಿ.ಎ. ಮುಹಮ್ಮದ್ ಅಲಿ ಕಮ್ಮರಡಿ, ರಿಯಾಝ್ ಅಹ್ಮದ್ ಕಣ್ಣೂರು, ಮೀಫ್ ಕೋಶಾಧಿಕಾರಿ ಅಬ್ದುಲ್ ರಹ್ಮಾನ್ ತೊಕ್ಕೊಟ್ಟು ಉಪಸ್ಥಿತರಿದ್ದರು.
Kshetra Samachara
08/07/2022 08:39 pm