ಸುಳ್ಯ : ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಶೇ. 100 ಅಂಕ ಪಡೆದ ಸುಳ್ಯ ತಾಲೂಕಿನ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕದ ವತಿಯಿಂದ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.
ಸುಳ್ಯದ ಕನ್ನಡ ಭವನದಲ್ಲಿ ನಡೆದ ಸಮಾರಂಭವನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸಹಕಾರಿ ರತ್ನ ಸೀತಾರಾಮ ರೈ ಸವಣೂರು ಉದ್ಘಾಟಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು.
ಕ.ಸಾ.ಪ. ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ. ಮಾಜಿ ಅಧ್ಯಕ್ಷ ಎಂ. ಮೀನಾಕ್ಷಿ ಗೌಡ, ಡಾ.ಹರಪ್ರಸಾದ್ ತುದಿಯಡ್ಕ ಅತಿಥಿಗಳಾಗಿದ್ದರು.ಕ.ಸಾ.ಪ.ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ, ಕ.ಸಾ.ಪ.ತಾಲೂಕು ಗೌರವ ಸಲಹೆಗಾರ ಲೀಲಾ ದಾಮೋದರ್, ಕಾರ್ಯಕ್ರಮ ನಿರ್ದೇಶಕ ಸಂಕೀರ್ಣ ಚೊಕ್ಕಾಡಿ, ಗೌರವ ಕಾರ್ಯದರ್ಶಿ ಚಂದ್ರಮತಿ ಮತ್ತು ತೇಜಸ್ವಿ ಕಡಪಳ ಉಪಸ್ಥಿತರಿದ್ದರು. ತೇಜಸ್ವಿ ಕಡಪಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕಿ ಮಮತಾ ಮೂಡಿತ್ತಾಯ, ವಿದ್ಯಾರ್ಥಿ ಪರವಾಗಿ ಪವನ್ ಎಣ್ಮೂರು ಮಾತನಾಡಿದರು. ಕ.ಸಾ.ಪ.ನಿರ್ದೇಶಕಿ ಸಾವಿತ್ರಿ ಕಣೆಮರಡ್ಕ ವಂದಿಸಿದರು. ನಿರ್ದೇಶಕಿ ಲತಾ ಸುಪ್ರೀತ್ ಮೋಂಟಡ್ಕ ವಂದಿಸಿದರು. ಕನ್ನಡದಲ್ಲಿ ಶೇ. 100 ಅಂಕ ಪಡೆದ 80 ವಿದ್ಯಾರ್ಥಿಗಳಿಗೆ ಕನ್ನಡ ಶಾಲು,ಸ್ಮರಣಿಕೆ,ಪುಸ್ತಕ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸವಣೂರು ಸೀತಾರಾಮ ರೈ ಮತ್ತು ಡಾ.ಕೆ.ವಿ.ಚಿದಾನಂದರನ್ನು ಕ.ಸಾ.ಪ.ವತಿಯಿಂದ ಸನ್ಮಾನಿಸಲಾಯಿತು.
Kshetra Samachara
03/07/2022 08:16 pm