ಸುರತ್ಕಲ್: ನವದುರ್ಗಾ ಫ್ರೆಂಡ್ಸ್ ಸರ್ಕಲ್ ರಥಬೀದಿ ವತಿಯಿಂದ ದ.ಕ.ಜಿಲ್ಲಾ ಪಂಚಾಯತ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಸಮಾರಂಭವು ಪುರಾತನ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಬೆಂಗಳೂರಿನ ರಾಜ್ಯ ಉಪಾಧ್ಯಕ್ಷರಾದ ಉರ್ಬಾನ್ ಪಿಂಟೋ , ಪೂರ್ಣಿಮಾ ಕಾರ್ಗೊ ಮೂವರ್ಸ್ ಸಂಸ್ಥೆಯ ಪಾಲುದಾರರಾದ ಹರೀಶ್ ಕರ್ನಿರೆ, ಉದ್ಯಮಿ ಪ್ರಕಾಶ್ ಮೈರ್ಪಾಡಿ ಕುಳಾಯಿ, ಜ್ಯೋತಿ ಟ್ರೇಡರ್ಸ್ ಮಾಲೀಕ ರಾಮಚಂದ್ರ ಕಾಮತ್ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಶುಭ ಹಾರೈಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಂಸ್ಥೆಯ ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿಯವರು ಸಮಾಜದಲ್ಲಿ ನೊಂದವರಿಗೆ ನೀಡುವ ಎಲ್ಲಾ ದಾನಕ್ಕಿಂತಲೂ ವಿದ್ಯೆಗೆ ಪ್ರೋತ್ಸಾಹ ನೀಡುವ ವಿದ್ಯಾದಾನ ಶ್ರೇಷ್ಠ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಉಜ್ವಲ ಭವಿಷ್ಯ ರೂಪಿಸಬಹುದು ಎಂದರು.
ವೇದಿಕೆಯಲ್ಲಿ ಶ್ರೀಕ್ಷೇತ್ರದ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರಾದ ಕೇಶವ ಪಿ.ಶೆಟ್ಟಿಗಾರ್, ದ.ಕ.ಜಿಲ್ಲಾ ಪಂಚಾಯತ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜಯಂತಿ, ಶಿಕ್ಷಕ ವೃಂದ, ಸಂಸ್ಥೆಯ ಅಧ್ಯಕ್ಷರಾದ ಹರೀಶ್ ಶೆಟ್ಟಿಗಾರ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
Kshetra Samachara
21/06/2022 09:01 am