ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಳಿಪಾಡಿ: 'ಸಂಘ ಸಂಸ್ಥೆಗಳು ಸಮಾಜಮುಖಿ ಕೆಲಸಗಳಿಂದ ಇತರರಿಗೆ ಮಾದರಿಯಾಗಬೇಕು'

ಮುಲ್ಕಿ: ಸಂಘ ಸಂಸ್ಥೆಗಳು ಕೇವಲ ವಾರ್ಷಿಕೋತ್ಸವ ಕ್ರೀಡೆಗೆ ಮಾತ್ರ ಸೀಮಿತವಾಗದೆ ಸಮಾಜ ಮುಖಿ ಕೆಲಸಕಾರ್ಯ ಮಾಡಿ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಬೇಕು ಎಂದು ಕಿನ್ನಿಗೋಳಿ ಯುಗಪುರುಸದ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.

ತಾಳಿಪಾಡಿ ಪುನರೂರು ಶ್ರೀ ವೀರಭದ್ರ ಯುವಕ ಮಂಡಲ ಮತ್ತು ಮಹಿಳಾ ಘಟಕದ ಆಶ್ರಯದಲ್ಲಿ ತಾಳಿಪಾಡಿ ಪುನರೂರು ಪದ್ಮಶಾಲಿ ಸಮಾಜದ ಸಭಾ ಭವನದಲ್ಲಿ ನಡೆದ 27 ವರ್ಷದ ಪುಸ್ತಕ ವಿತರಣೆ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಮಾರು 300 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ , 10 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಉದ್ಯಮಿ ರಿಜ್ವಾನ್ ಅಹಮ್ಮದ್ , ರಾಮ ಗುರಿಕಾರ , ಪದ್ಮಶಾಲಿ ಸಮಾಜ ಸೇವಾ ಸಂಘದ ಪ್ರಕಾಶ್ ಶೆಟ್ಟಿಗಾರ್ ನೀರಪಲ್ಕೆ , ಸಂಘದ ಅಧ್ಯಕ್ಷ ದಯಾನಂದ ಶೆಟ್ಟಿಗಾರ್, ಮಹಿಳಾ ಘಟಕದ ಅಧ್ಯಕ್ಷೆ ಸುಗುಣಾ ಭಾಸ್ಕರ , ಸುಂದರ್ ಕೆ. ಶೆಟ್ಟಿಗಾರ್, ಉಪಸ್ಥಿತರಿದ್ದರು.ಯಶವಂತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

19/06/2022 04:48 pm

Cinque Terre

4.13 K

Cinque Terre

0

ಸಂಬಂಧಿತ ಸುದ್ದಿ