ಉಳ್ಳಾಲ: ಕೊಣಾಜೆ ವಿಶ್ವಮಂಗಳ ವಿದ್ಯಾಸಂಸ್ಥೆಯಲ್ಲಿ 623 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದ ಶಾಝಿನ್ ಅಬ್ದುಲ್ ರಝಾಕ್ ಮರು ಮೌಲ್ಯಮಾಪನದಲ್ಲಿ ಮತ್ತೆರಡು ಅಂಕಗಳನ್ನು ಪಡೆಯುವುದರೊಂದಿಗೆ 625 ಅಂಕಕ್ಕೆ 625 ಅಂಕವನ್ನು ಪಡೆದು ಶಾಲಾ ಇತಿಹಾಸದಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಯಾಗಿ ಗುರುತಿಸಿದ್ದಾನೆ.
ವಿಜ್ಞಾನ ಪತ್ರಿಕೆಯಲ್ಲಿ 98 ದೊರೆತಿದ್ದರೆ ಉಳಿದ್ದೆಲ್ಲಾ ವಿಷಯದಲ್ಲೂ ಪೂರ್ಣ ಪ್ರಮಾಣದ ಅಂಕ ಲಭ್ಯವಾಗಿತ್ತು. ಮತ್ತೆ ಮರು ಮೌಲ್ಯಮಾಪನದಲ್ಲಿ ವಿಜ್ಞಾನ ವಿಷಯದಲ್ಲೂ ಪೂರ್ಣ ಅಂಕಗಳು ದೊರೆತಿದ್ದು, ಇದೀಗ ವಿಶ್ವಮಂಗಳ ಶಾಲಾ ಇತಿಹಾಸದಲ್ಲಿ 625 ರಲ್ಲಿ 625 ಅಂಕ ಪಡೆದ ಪ್ರಥಮ ವಿದ್ಯಾರ್ಥಿಯಾಗಿ ಗುರುತಿಸಿದ್ದಾನೆ. ಈತ ಬೊಳಂತೂರು ಗ್ರಾಮದ ಡಾ.ಬಿರಾನ್ ಮೊಯ್ದಿನ್ ಹಾಗೂ ಶಾಹಿದಾ ಬಿರಾನ್ ಅವರ ಪುತ್ರನಾಗಿದ್ದಾನೆ.
Kshetra Samachara
09/06/2022 11:02 am