ಮುಲ್ಕಿ: ಸುಮಾರು 98 ಪ್ರೌಢ ಶಾಲೆಗಳನ್ನು ಹೊಂದಿರುವ ಮಂಗಳೂರು ಉತ್ತರ ಶಿಕ್ಷಣ ಕ್ಷೇತ್ರದ ವ್ಯಾಪ್ತಿಯಲ್ಲಿ, ಮುಲ್ಕಿ ಸಮೀಪದ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಟಾಪರ್ ಆಗಿ ಮೂಡಿ ಬಂದಿದ್ದಾರೆ.
ಕಿಲ್ಪಾಡಿ ಶ್ರೀ ವ್ಯಾಸಮಹರ್ಷಿ ಶಾಲೆಯ ವಿ. ಅಕ್ಷತಾ ಕಾಮತ್ ವಡೇರಬೆಟ್ಟು, ದೀಕ್ಷಾ ವಿ. ಶೆಟ್ಟಿ 625/ 625 ಅಂಕ ಗಳಿಸಿ ಟಾಪರ್ ಆಗಿ ಮೂಡಿ ಬಂದಿದ್ದಾರೆ. ವಿಶೇಷವೆಂದರೆ ಇಬ್ಬರೂ ಕೋಚಿಂಗ್ ಕ್ಲಾಸ್ ಹೋಗದೆ ಶಿಕ್ಷಕರ ಹಾಗೂ ಪೋಷಕರ ಪರಿಶ್ರಮದಿಂದ ಗುರಿ ಸಾಧಿಸಿದ್ದಾರೆ. ಮುಲ್ಕಿ ಉದ್ಯಮಿ ಶಶಿಧರ್ ವಿ. ಕಾಮತ್ ಹಾಗೂ ನಂದಿತಾ ಕಾಮತ್ ದಂಪತಿಗಳ ಪುತ್ರಿಯಾದ ವಿ. ಅಕ್ಷತಾ ಕಾಮತ್ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ಕಲಿಯುವಿಕೆಗೆ ಶಿಕ್ಷಕರು, ಹೆತ್ತವರು ಪ್ರೋತ್ಸಾಹ ನೀಡಿದ್ದು ಮುಂದೆ ವೈದ್ಯೆಯಾಗುವ ಇಚ್ಛೆ ಇದೆ ಎಂದು ಹೇಳಿದ್ದಾರೆ..
ಬಪ್ಪನಾಡು ಉದ್ಯಮಿ ವೇದಾನಂದ ಶೆಟ್ಟಿ ಹಾಗೂ ವೀಣಾ ಶೆಟ್ಟಿ ದಂಪತಿಯ ಪುತ್ರಿಯಾದ ದೀಕ್ಷಾ ವಿ. ಶೆಟ್ಟಿ ಟಾಪರ್ ಆಗಿ ಮೂಡಿ ಬಂದಿದ್ದು, ಮುಂದೆ ಇಂಜಿನಿಯರ್ ಆಗುವ ಆಸೆ ಹೊಂದಿದ್ದಾಳೆ. ಮುಲ್ಕಿ ಶ್ರೀ ವ್ಯಾಸಮಹರ್ಷಿ ಶಾಲೆಯ 101 ವಿದ್ಯಾರ್ಥಿಗಳಲ್ಲಿ 100 ಮಂದಿ ಉನ್ನತ ಶ್ರೇಣಿಯಲ್ಲಿ ಸೇರ್ಪಡೆಯಾಗಿರುವುದು ಶಾಲೆಗೆ ಸಂದ ಗರಿಯಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಚಂದಿಕಾ ಭಂಡಾರಿ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.
PublicNext
19/05/2022 05:40 pm