ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಪುಟಾಣಿಗಳ ಮೇಲೆ ಪುಷ್ಪವೃಷ್ಟಿಗೈದ ಶಿಕ್ಷಕರು !

ಕಾಪು: ಬೇಸಗೆ ರಜೆ ಪೂರ್ಣ ಗೊಂಡು ಇಂದಿನಿಂದ 2022 -23 ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಳ್ಳಲಿದ್ದು ಈ ನಿಟ್ಟಿನಲ್ಲಿ ಇಂದು ವಿದ್ಯಾರ್ಥಿ ಗಳನ್ನು ಶಾಲೆಗೆ ಭವ್ಯವಾಗಿ ಸ್ವಾಗತಿಸಲಾಯಿತು.

ಕಾಪು ತಾಲೂಕಿನ‌ ವಿವಿಧ ಶಾಲೆಗಳಲ್ಲಿ ಅಧ್ಯಾಪಕರು, ಶಾಲಾಡಳಿತ ಮಂಡಳಿ, ಹಳೆ ವಿದ್ಯಾರ್ಥಿಗಳು ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು.

ಮಜೂರು ಕರಂದಾಡಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಚೆಂಡೆ, ವಾದ್ಯ, ಗೊಂಬೆ ಕುಣಿತಗಳಿಂದ ಅದ್ಧೂರಿಯಾಗಿ ಆರತಿ ಬೆಳಗಿ, ಸಿಹಿತಿಂಡಿ ನೀಡಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಫದ ಅಧ್ಯಕ್ಷ ಲೀಲಾಧರ್ ಶೆಟ್ಟಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪದ್ಮನಾಭ ಶಾನಭಾಗ್,ಶಾಲಾ ಮುಖ್ಯೋಪಾಧ್ಯಾಯ ಆರ್. ಎಸ್.ಕಲ್ಲುರ , ಪಂಚಾಯತ್ ಅಧ್ಯಕ್ಷೆ ಶರ್ಮಿಳಾ ಆಚಾರ್ಯ, ಪಂಚಾಯತ್ ಸದಸ್ಯ ಭಾಸ್ಕರ್ ಕುಮಾರ್, ನಿರ್ಮಲ್ ಕುಮಾರ್ ಹೆಗ್ಡೆ, ಶಶಿಶೇಖರ್ ಭಟ್, ಕರೀಂ, ನಾಗಭೂಷಣ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

16/05/2022 01:09 pm

Cinque Terre

15.13 K

Cinque Terre

0

ಸಂಬಂಧಿತ ಸುದ್ದಿ