ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ:ಬಿರುವೆರ್ ಕುಡ್ಲ ಬಜಪೆ ಘಟಕದಿಂದ ಶೈಕ್ಷಣಿಕ ನೆರವು

ಬಜಪೆ: ಮಂಗಳೂರು ತಾಲೂಕಿನ ಎಕ್ಕಾರು ನಿವಾಸಿ ರವಿ ಅವರ ಮಗಳು ಜ್ಯೋತಿ ರವರಿಗೆ ವಿದ್ಯಾಭ್ಯಾಸಕ್ಕೆ ಬಿರುವೆರ್ ಕುಡ್ಲ ಬಜಪೆ ಘಟಕದ ಸ್ಪಂದನ ತಂಡದ ವತಿಯಿಂದ ಶೈಕ್ಷಣೆಕ ನೆರವನ್ನು ನೀಡಲಾಯಿತು.

ಕಡುಬಡತನದಲ್ಲಿ ಇರುವ ರವಿಯವರ ಕುಟುಂಬವಾಗಿದ್ದು, ಮಗಳು ಜ್ಯೋತಿ ಯವರು ಲಕ್ಷ್ಮೀ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಮಂಗಳೂರು ಇದರಲ್ಲಿ ಎರಡನೇ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ, ಇವರ ಎರಡನೇ ವರ್ಷದ ಕಾಲೇಜಿನ ಶುಲ್ಕ ಕಟ್ಟಲು ಸಾಧ್ಯವಾಗದೆ ಇದ್ದ ಕಾರಣ ಜ್ಯೋತಿಯವರ ತಾಯಿ ಬಿರುವೆರ್ ಕುಡ್ಲ ಬಜಪೆ ಘಟಕದ ಸದಸ್ಯ ಕಿರಣ್ ಪೂಜಾರಿ ಅವರಿಗೆ ಮನವಿಯನ್ನು ಮಾಡಿದ್ದರು. ಮನವಿಗೆ ತಕ್ಷಣವೇ ಸ್ಪಂದಿಸಿದ ಬಿರುವೆರ್ ಕುಡ್ಲ ಬಜಪೆ ಘಟಕ ಸ್ಪಂದನ ತಂಡದ ವತಿಯಿಂದ ಜ್ಯೋತಿ ರವರಿಗೆ ವಿದ್ಯಾಭ್ಯಾಸಕ್ಕೆ ಸಹಾಯಧನವನ್ನು ನೀಡಲಾಯಿತು.

ಈ ಸಂದರ್ಭ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಯಾನ್ ಎಕ್ಕಾರು, ಯೂತ್ ಕಾಂಗ್ರೆಸ್ ಎಕ್ಕಾರು ಇದರ ಅಧ್ಯಕ್ಷ ಕಿರಣ್ ಪೂಜಾರಿ ಎಕ್ಕಾರು, ಘಟಕದ ಪ್ರಧಾನ ಕಾರ್ಯದರ್ಶಿ ಸೂರಜ್ ಪೂಜಾರಿ ಎಕ್ಕಾರು, ಕಟೀಲು ವಲಯದ ಸಂಚಾಲಕ ರಮಾನಂದ ಪೂಜಾರಿ ಕಟೀಲು, ಚಿದಾನಂದ ಪೂಜಾರಿ ಎಕ್ಕಾರು, ರವಿ ಕಟೀಲು ಹಾಗೂ ಮತ್ತಿತರರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

11/05/2022 11:16 am

Cinque Terre

2.07 K

Cinque Terre

0

ಸಂಬಂಧಿತ ಸುದ್ದಿ