ಉಡುಪಿ: ರಾಜ್ಯದೆಲ್ಲೆಡೆ ತೀವ್ರ ವಿವಾದ ಸ್ವರೂಪ ಪಡೆದಿದ್ದ ಹಿಜಾಬ್ ಹೋರಾಟ ಆರಂಭಗೊಂಡಿದ್ದು ಉಡುಪಿಯ ಬಾಲಕಿಯರ ಸರಕಾರಿ ಕಾಲೇಜಿನಲ್ಲಿ. ಇಂದು ಇಲ್ಲಿ ಶಾಂತಿಯುತ ವಾತಾವರಣ ನೆಲೆಸಿದ್ದು, ವಿದ್ಯಾರ್ಥಿಗಳು ಎಂದಿನಂತೆ ತರಗತಿಗೆ ಬರುತ್ತಿದ್ದಾರೆ. ಆದರೆ, ಇದೇ ಕಾಲೇಜಿನಿಂದ ಹಿಜಾಬ್ ಹಕ್ಕಿಗಾಗಿ ಹೋರಾಟ ನಡೆಸಿದ್ದ ಆರು ಮಂದಿ ಹಿಜಾಬ್ ಹೋರಾಟಗಾರ್ತಿಯರು ಮೊದಲ ದಿನವಾದ ಇಂದು ಗೈರಾಗಿದ್ದಾರೆ.
ಈ ಆರು ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿಲ್ಲ. ಎಲ್ಲ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಕ್ಲಾಸಿನಲ್ಲಿ ಕುಳಿತುಕೊಂಡಿದ್ದಾರೆ.
ಎಂದಿನಂತೆ ಕ್ಲಾಸುಗಳು ಆರಂಭ ಆಗಿವೆ ಎಂದು ಪ್ರಾಂಶುಪಾಲ ರುದ್ರೇಗೌಡ ಎಸ್. ಮಾಹಿತಿ ನೀಡಿದ್ದಾರೆ.
Kshetra Samachara
16/02/2022 11:32 am