ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಾನೂನು ವಿವಿ ಕುಲಪತಿಗೆ ಮಸಿ ಬಳಿದ ಪ್ರಕರಣ; ಪ್ರಾಧ್ಯಾಪಕರಿಂದ ಪ್ರತಿಭಟನೆ

ಮಂಗಳೂರು: ಹುಬ್ಬಳಿಯ ವಿವಿ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಪ್ರೊ. ಡಾ. ಈಶ್ವರ ಭಟ್ ಅವರಿಗೆ ಕೆಲ ಕಿಡಿಗೇಡಿ ವಿದ್ಯಾರ್ಥಿಗಳು ಪ್ರತಿಭಟನೆಯ ನೆಪದಲ್ಲಿ ಮಸಿ ಬಳಿದು ಅವಮಾನಿಸಿರುವ ಘಟನೆ ಖಂಡಿಸಿ ನಗರದ ಎಸ್ ಡಿಎಂ ಕಾಲೇಜು ಆವರಣದಲ್ಲಿ ಕಾನೂನು ಕಾಲೇಜಿನ ಪ್ರಾಧ್ಯಾಪಕರಿಂದ ಪ್ರತಿಭಟನೆ ನಡೆಯಿತು. ‌

ಈ ಪ್ರತಿಭಟನೆಯಲ್ಲಿ ಮಂಗಳೂರು, ಉಡುಪಿ, ಪುತ್ತೂರು, ಸುಳ್ಯ ಹಾಗೂ ಚಿಕ್ಕಮಗಳೂರು ಕಾನೂನು ಕಾಲೇಜುಗಳ ಅಧ್ಯಾಪಕರು ಕಪ್ಪು ಪಟ್ಟಿ ಧರಿಸಿ, ಮೌನವಾಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಎಸ್ ಡಿ ಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪುಷ್ಪರಾಜ್ ಮಾತನಾಡಿ,

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯ ಹಕ್ಕು ಎಲ್ಲರಿಗೂ ಇದೆ. ಆದರೆ, ಪ್ರತಿಭಟನೆ ನೆಪದಲ್ಲಿ ಅವಮಾನಿಸೋದು, ತೇಜೋವಧೆ ಮಾಡೋದು ನಿಜವಾಗಿಯೂ ಖಂಡನೀಯ. ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಪ್ರೊ. ಡಾ. ಈಶ್ವರ ಭಟ್ ಅವರಿಗೆ ಪ್ರತಿಭಟನೆ ನೆಪದಲ್ಲಿ ಕಿಡಿಗೇಡಿಗಳು ಮಸಿ ಬಳಿದು ಅವಮಾನಿಸಿದ್ದಾರೆ. ಇದನ್ನು ಕಾನೂನು ವಿದ್ಯಾಲಯದ ಎಲ್ಲ ಅಧ್ಯಾಪಕರು ಖಂಡಿಸುತ್ತೇವೆ ಎಂದು ಹೇಳಿದರು.

Edited By : Manjunath H D
Kshetra Samachara

Kshetra Samachara

10/01/2022 01:45 pm

Cinque Terre

3.81 K

Cinque Terre

0

ಸಂಬಂಧಿತ ಸುದ್ದಿ