ಮುಲ್ಕಿ: ಅವಿಭಾಜಿತ ದ.ಕ ಹಾಗೂ ಉಡುಪಿ ಜಿಲ್ಲಾ ಕರಾವಳಿ ಸಂಗೀತ ಕಲಾವಿದರ ಒಕ್ಕೂಟ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಸೇವಾ ಯುವಕ ವೃಂದ ಸಂಯುಕ್ತ ಆಶ್ರಯದಲ್ಲಿ 'ಸುಗಮ ಸಂಗೀತ ಶಿಬಿರ' ದೇವಸ್ಥಾನದ ಅನ್ನಪೂರ್ಣ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಶ್ರೀಪತಿ ಉಪಾಧ್ಯಾಯ ಮತ್ತು ನರಸಿಂಹ ಭಟ್ ದೀಪಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭ ಅರ್ಚಕ ಶ್ರೀಪತಿ ಉಪಾಧ್ಯಾಯ ಆಶೀರ್ವಚನ ನೀಡಿ ಬಾಲ ಪ್ರತಿಭೆಗಳನ್ನು ಗುರುತಿಸಲು ಸುಗಮ ಸಂಗೀತ ಶಿಬಿರ ಸಹಕಾರಿ ಎಂದರು.
ವೇದಿಕೆಯಲ್ಲಿ ಯುವಕ ವೃಂದದ ಗೌರವಾಧ್ಯಕ್ಷ ಮಹೀಮ್ ಹೆಗ್ಡೆ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ರಮೇಶ್ ಸಾಲ್ಯಾನ್, ಶಿಬಿರ ಸಂಪನ್ಮೂಲ ಕಲಾವಿದರಾದ ರವೀಂದ್ರ ಪ್ರಭು, ಪ್ರಮೋದ್ ಸಪ್ರೆ ಮತ್ತಿತರರು ಉಪಸ್ಥಿತರಿದ್ದರು. ಎಂ.ಜಿ.ಕೃಷ್ಣಪ್ರಸಾದ್ ನಿರೂಪಿಸಿದರು.
ಬಳಿಕ ಸಂಗೀತ ಶಿಬಿರ ನಡೆಯಿತು.
Kshetra Samachara
12/12/2021 11:28 am