ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಮಕ್ಕಳ ಶಿಕ್ಷಣದ ಕೇಂದ್ರಬಿಂದು ಅಂಗನವಾಡಿಯಾಗಿದೆ. ಕೊರೊನಾ ನಿಯಮಗಳನ್ನು ಪಾಲಿಸಿಕೊಂಡು ಶಿಕ್ಷಣ ಪಡೆದು ರಾಷ್ಟ್ರಕ್ಕೆ ಮಾದರಿಯಾಗಿ ಎಂದು ಮಕ್ಕಳಿಗೆ ಶುಭಹಾರೈಸಿದರು.
ಹಳೆಯಂಗಡಿಯ ಗ್ರಾಮ ಪಂಚಾಯತ್ ಬಳಿಯಿರುವ ಅಂಗನವಾಡಿ ಕೇಂದ್ರ ಹಾಗೂ ಯುಬಿಎಂಸಿ ಶಾಲೆಯ ಬಳಿಯಿರುವ ಅಂಗನವಾಡಿ ಕೇಂದ್ರದಲ್ಲಿ ಪ್ರಾರಂಭೋತ್ಸವವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಹಳೆಯಂಗಡಿ ಗ್ರಾ.ಪಂ ಸದಸ್ಯ ವಿನೋದ್‌ಕುಮಾರ್ ಕೊಳುವೈಲು ಮತ್ತಿತರರು ಉಪಸ್ಥಿತರಿದ್ದರು. ಮಕ್ಕಳಿಗೆ ಗುಲಾಬಿ ಹೂ ಹಾಗೂ ಸಿಹಿತಿಂಡಿ ನೀಡಿ ಮೂಲಕ ಶಾಲೆಗೆ ಸ್ವಾಗತಿಸಲಾಯಿತು.
Kshetra Samachara
09/11/2021 09:01 pm