ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೊಳಿ : ಶಿಕ್ಷಣದ ಅವಧಿಯಲ್ಲಿ ಜೀವನದ ಉನ್ನತ ಗುರಿಯನ್ನು ಈಡೇರಿಸಲು ನಿರಂತರ ಶ್ರಮವಹಿಸಿ

ಮುಲ್ಕಿ:ಶಿಕ್ಷಣದ ಅವಧಿಯಲ್ಲಿ ಜೀವನದಲ್ಲಿ ಉನ್ನತ ಗುರಿಯನ್ನು ಇಟ್ಟು ಕೊಂಡು ಈಡೇರಿಸಲು ನಿರಂತರ ಶ್ರಮವಹಿಸಬೇಕೆಂದು ಪೊಂಪೈ ಕಾಲೇಜಿನ ಸಂಚಾಲಕ .ರೆ.ಫಾ.ಓಸ್ವಾಲ್ಡ್ ಮೊಂತೆರೊ ಹೇಳಿದರು.

ಪೊಂಪೈ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ (ಐ ಕ್ಯು ಎ ಸಿ) ದ ನೇತೃತ್ವದಲ್ಲಿ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಹಮ್ಮಿಕೊಂಡ ಮೂರು ದಿನಗಳ ಕಾಲೇಜಿನ ಪ್ರವೇಶಾರಂಭದ ಪೂರ್ವಭಾವಿ ಸಿದ್ದತೆಯ *ದೀಕ್ಷಾರಂಭ* ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಸಂಸ್ಥೆಯ ಪ್ರಾಂಶುಪಾಲರಾದ ನಡಾ|| ಪುರುಷೋತ್ತಮ ಕೆ.ವಿ. ಅಧ್ಯಕ್ಷತೆಯನ್ನು ವಹಿಸಿದ್ದು ಮಂಡಳಿಯ ಸದಸ್ಯ, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಫಾ| ಸುನಿಲ್ ಜಾರ್ಜ್‌ಡಿಸೋಜ ಮಾಹಿತಿ ನೀಡಿದರು.ನ್ಯಾಕ್ ಸಂಯೋಜಕ ಪ್ರೊ.ಯೋಗೀಂದ್ರ ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಂಶುಪಾಲ ಡಾ|| ಪುರುಷೋತ್ತಮ ಕೆ.ವಿ. ಸ್ವಾಗತಿಸಿದರು. ಐ ಕ್ಯು ಎ ಸಿ ಸಂಯೋಜಕರಾದಡಾ.ಇ.ವಿಕ್ಟರ್ ವಾಜ್‌ರವರು ವಂದಿಸಿದರು. ತೃತೀಯ ಬಿ.ಕಾಂ. ವಿದ್ಯಾರ್ಥಿನಿ . ನಿಶಾ ಜೋಯ್ಸ್ ಲೋಬೊ ಕಾರ್‍ಯಕ್ರಮವನ್ನು ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

09/11/2021 04:06 pm

Cinque Terre

3.77 K

Cinque Terre

0

ಸಂಬಂಧಿತ ಸುದ್ದಿ