ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಜೆಇಇ ಅಡ್ವಾನ್ಸ್ ಗೆ ಆಳ್ವಾಸ್ 491 ವಿದ್ಯಾರ್ಥಿಗಳು ಆಯ್ಕೆ

ಮೂಡುಬಿದಿರೆ: ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, 491 ವಿದ್ಯಾರ್ಥಿಗಳು ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆಯನ್ನು ಪಡೆದಿದ್ದಾರೆ. ಆಳ್ವಾಸ್ ಒಂದೇ ಸಂಸ್ಥೆಯಿAದ ಗರಿಷ್ಠ ಸಂಖ್ಯೆಯು ಆರ್ಹತೆ ಪಡೆದಿರುವುದು ದಾಖಲೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆಟಗಿರಿ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಜಯಸೂರ್ಯ ಎಂ. ಎಸ್. 147ನೇ ರ‍್ಯಾಂಕ್, ಹರ್ಷಿತ ಗಂಗಾಧರಪ್ಪ 172 ನೇ ರ‍್ಯಾಂಕ್, ಧನರಾಜ 206 ನೇ ರ‍್ಯಾಂಕ್, ಶೈಕ್ಷಾ ನಾಯಕ ಬಿ ಪಿ 213 ನೇ ರ‍್ಯಾಂಕ್, ಪ್ರಜ್ವಲ್ ಆರ್ 350 ನೇ ರ‍್ಯಾಂಕ್, ಐಶ್ವರ್ಯ ಎಂ. ಗಸ್ತಿ 955 ನೇ ರ‍್ಯಾಂಕ್, ಮಂಜುನಾಥ ಎಸ್. 993ನೇ ರ‍್ಯಾಂಕ್ ಪಡೆದಿದ್ದಾರೆ.

ಕಿರಣ್ ರೆಡ್ಡಿ ಆರ್ ಜೆ.ಇ.ಇ ಆರ್ಕ್ನಲ್ಲಿ 99.48 ಮತ್ತು ಜೆ.ಇ.ಇ ಮೈನ್ಸ್ನಲ್ಲಿ ಕಿರಣ್ ರೆಡ್ಡಿ 99.26, ವರುಣ್ ಅನ್ನಸಾಬ್ ಶಿಪುರೆ 99.04, ಸುಜ್ಞಾನ್ ಆರ್ ಶೆಟ್ಟಿ 98.95, ಗುರುರಾಜ್ ಮಹಾದೇವ್ ಮಾದನ್ನಾವರ್ 98.75 ಪರ್ಸಟೈಲ್ ಪಡೆದಿದ್ದಾರೆ.

95 ಪರ್ಸಂಟೈಲ್‌ಗಿಂತ ಮೇಲೆ 52 ವಿದ್ಯಾರ್ಥಿಗಳು, 90 ಪರ್ಸಂಟೈಲ್‌ಗಿಂತ ಮೇಲೆ 172 ವಿದ್ಯಾರ್ಥಿಗಳು, 88 ಪರ್ಸಂಟೈಲ್‌ಗಿಂತ ಮೇಲೆ 211 ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. 491 ವಿದ್ಯಾರ್ಥಿಗಳಲ್ಲಿ 77 ಸಾಮಾನ್ಯ ವರ್ಗದ, 335 ಒ.ಬಿ.ಸಿ ವರ್ಗದ, 48 ಎಸ್.ಸಿ ವರ್ಗದ ಹಾಗೂ 31 ಎಸ್.ಟಿ ವರ್ಗದ ವಿದ್ಯಾರ್ಥಿಗಳಿದ್ದಾರೆ ಎಂದು ಮೋಹನ ಆಳ್ವ ಮಾಹಿತಿ ನೀಡಿದ್ದಾರೆ.

ಕಾಲೇಜಿನ ಪ್ರಾಂಶುಪಾಲ ಪ್ರೊ.ಎಮ್ ಸದಾಕತ್, ಐ.ಐ.ಟಿ ಸಂಯೋಜಕ ಪ್ರೊ.ಕೌಶಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

17/09/2021 03:18 pm

Cinque Terre

4.7 K

Cinque Terre

0

ಸಂಬಂಧಿತ ಸುದ್ದಿ