ಬಜಪೆ: ರಜತ ವರ್ಷದ ಸಂಭ್ರಮದಲ್ಲಿರುವ ಎಕ್ಕಾರು ವಿಜಯ ಯುವ ಸಂಗಮದ ವತಿಯಿಂದ ಕಟೀಲು ಪ್ರೌಢಶಾಲೆಯ ನಿವೃತ್ತ ಉಪಪ್ರಾಚಾರ್ಯ, ಸಾಹಿತಿ, ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಅಪೂರ್ವ ಪತ್ರಿಕೆ, ಅಂಚೆ ಚೀಟಿ ಸಂಗ್ರಹಣೆ ಮಾತ್ರವಲ್ಲದೆ ಸಹಸ್ರಾರು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಿ ಪೋಷಿಸಿದ ಉಮೇಶ್ ರಾವ್ ಎಕ್ಕಾರು ಇವರನ್ನು ಸನ್ಮಾನಿಸಲಾಯಿತು. ಎಕ್ಕಾರು ಸರಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ಸರಕಾರಿ ಪ್ರೌಢಶಾಲೆಯ ಶಿಕ್ಷಕರನ್ನೂ ಅಭಿನಂದಿಸಿ ಗೌರವಿಸಲಾಯಿತು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುದೀಪ್ ಆರ್ ಅಮೀನ್, ಶ್ರೀಮತಿ ಕಸ್ತೂರಿ ಪಂಜ, ಈಶ್ವರ್ ಕಟೀಲ್, ವಿಜಯ ಶೆಟ್ಟಿ ಕಿನ್ನಿಲ್ಲ, ರವಿಚಂದ್ರ ಶೆಟ್ಟಿ, ಸಂಸ್ಥೆಯ ಗೌರವ ಅಧ್ಯಕ್ಷ ರತ್ನಾಕರ ಶೆಟ್ಟಿ, ಅಧ್ಯಕ್ಷ ಆದರ್ಶ್ ಶೆಟ್ಟಿ ಎಕ್ಕಾರ್, ಗ್ರಾ. ಪಂ. ಸದಸ್ಯರಾದ ವಿಕ್ರಮ್ ಮಾಡ, ಸತೀಶ್ ಶೆಟ್ಟಿ, ಅನಿಲ್ ಕುಮಾರ್, ಪದ್ಮಾಕ್ಷಿ, ಉಪಸ್ಥಿತರಿದ್ದರು.
Kshetra Samachara
05/09/2021 06:36 pm