ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಗ್ರಂಥಪಾಲಕರ ದಿನಾಚರಣೆ ಹಾಗೂ ಪುಸ್ತಕ ಪ್ರದರ್ಶನ ಉದ್ಘಾಟನೆ

ಮುಲ್ಕಿ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಎಲ್ಲಾ ಗ್ರಂಥಾಲಯಗಳಲ್ಲಿ ಸ್ವಾತಂತ್ರ್ಯ ಸಂಬಂದಿಸಿದ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಧಿಕಾರಿ ಗಾಯತ್ರಿ ಹೇಳಿದರು.

ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಆಶ್ರಯದಲ್ಲಿ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ಕಟ್ಟಡದಲ್ಲಿರುವ ಶಾಖಾ ಗ್ರಂಥಾಲಯ ದಲ್ಲಿ ನಡೆದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಗ್ರಂಥಾಪಾಲಕರ ದಿನಾಚರಣೆ ಹಾಗೂ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಮುಲ್ಕಿ ಬಿಲ್ಲವ ಸಮಾಜ ಸಂಘದ ಆಧ್ಯಕ್ಷರಾದ ರಮೇಶ್ ಅಮೀನ್ ಕೊಕ್ಕರಕಲ್ ಮಾತನಾಡಿ, ಸುಮಾರು 45ವರ್ಷಗಳಿಂದ ಉಚಿತವಾಗಿ ಮೂಲ್ಕಿ ಬಿಲ್ಲವ ಸಮಾಜ ಸಂಘದಲ್ಲಿ ಗ್ರಂಥಾಲಯವನ್ನು ನಿರ್ವಹಿಸಲು ಉಚಿತವಾಗಿ ಅನುವುಮಾಡಿ ಕೊಡಲಾಗಿದೆ. ಸಹಸ್ರಾರು ಜನರು ಈ ಗ್ರಾಥಾಲಯದ ಪ್ರಯೋಜನ ಪಡೆದು ಜ್ಞಾನವಂತರಾಗಿ ಉತ್ತಮ ಉದ್ಯೋಗ ಪಡೆದಿದ್ದಾರೆ ಎಂದರು.

ಮಂಗಳೂರು ಸರಕಾರಿ ನೌಕರರ ಸಂಘದ ಜಿಲ್ಲಾ ಧ್ಯಕ್ಷ ಪಿ.ಕೆ ಕೃಷ್ಣ ಇವರು ಪ್ರಾಸ್ತವಿಕ ಸಮಾರಂಭದ ಮಾಹಿತಿ ನೀಡಿದರು. ಶಾಖಾ ಗ್ರಂಥಾಲಯ ಮೂಡಬಿದ್ರೆ ಇಲ್ಲಿನ ಗ್ರಂಥಪಾಲಕಿ ಪ್ರಣಿತ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಾಖಾ ಗ್ರಂಥಾಲಯ ಪುತ್ತೂರು ನಮಿತಾ ವಂದಿಸಿದರು.

Edited By : PublicNext Desk
Kshetra Samachara

Kshetra Samachara

14/08/2021 04:10 pm

Cinque Terre

3.27 K

Cinque Terre

0

ಸಂಬಂಧಿತ ಸುದ್ದಿ