ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಪ್ರತಿಭಾ ಪುರಸ್ಕಾರ ದ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಶ್ಲಾಘನೀಯ: ಪಂಜ ಭಾಸ್ಕರ ಭಟ್.

ಮುಲ್ಕಿ: ಹಳೆಯಂಗಡಿ ಸಮೀಪದ ಪಂಜ ಕೊಯಿಕುಡೆ ಶ್ರೀ ಹರಿಪಾದ ಧರ್ಮದೈವ ಜಾರಂತಾಯ ದೈವಸ್ಥಾನದಲ್ಲಿ ಕಳೆದ ಸಾಲಿನ ಎಸೆಸೆಲ್ಸಿ ಪಿಯುಸಿ ಹಾಗೂ ಪ್ರಾಥಮಿಕ ತರಗತಿಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪಂಜ, ಕೊಯಿ ಕುಡೆ , ಕಾಪಿಕಾಡು ಪರಿಸರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾಜೀ ಧಾರ್ಮಿಕ ಪರಿಷತ್ ಸದಸ್ಯರು, ತಂತ್ರಿಗಳಾದ ಪಂಜ ಭಾಸ್ಕರ ಭಟ್ ಮಾತನಾಡಿ ಪ್ರತಿಭಾಪುರಸ್ಕಾರದ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮುಂದಿನ ಪೀಳಿಗೆಗೆ ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ನಲ್ಯ ಗುತ್ತು ಪ್ರಕಾಶ್ ಶೆಟ್ಟಿ ಮಾತನಾಡಿ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಾಗಿ ರಾಷ್ಟ್ರಕ್ಕೆ ಮಾದರಿಯಾಗಬೇಕು ಎಂದರು..ಸಮಾರಂಭದ ಮುಖ್ಯ ಅತಿಥಿಗಳಾಗಿ ಮುಂಬೈ ಬಂಟರ ಸಂಘದ ಮಾಜೀ ಅಧ್ಯಕ್ಷ ಉತ್ರಂಜೆ ಭುಜಂಗ ಶೆಟ್ಟಿ ಪಡುಪಣಂಬೂರು, ಶಂಕರ್ ಶೆಟ್ಟಿ ನಲ್ಯ ಗುತ್ತು, ಪ್ರವೀಣ್ ಶೆಟ್ಟಿ ಪಂಜದ ಗುತ್ತು, ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದ ಕ ಜಿ ಪ ಹಿರಿಯ ಪ್ರಾಥಮಿಕ ಶಾಲೆ ಪಂಜ , ಕೊಯಿಕುಡೆ. ಏಳನೇ ನೇ ತರಗತಿಯ ಮಾನಸ ,ಯೋಗನಿಧಿ , ಪ್ರೀತಿ.ಪ್ರಜ್ವಲ್.ಸೌಮ್ಯ . ಎಸೆಸೆಲ್ಸಿ ವಿಭಾಗದಲ್ಲಿ, ತ್ರಶಾ ಶೆಟ್ಟಿ , ಭಾರತಿ ಭವಾನಿಶಂಕರ್ ,ಕಾವ್ಯ , ಲೋಲಾಕ್ಷಿ ಕೇಶವ ಪೂಜಾರಿ,ಪಿಯುಸಿ ವಿಭಾಗ ದ ದೀಕ್ಷಿತ ಶೆಟ್ಟಿ , ಭಾರತಿ ,ಭವಾನಿ ಶಂಕರ ಶೆಟ್ಟಿ , ಜ್ಯೋತಿ , ಲೀಲಾ , ಜನಾರ್ಧನ ಶೆಟ್ಟಿಗಾರ್,ರಿತೇಶ್ , ಜಯಂತಿ ಯೋಗೀಶ್, ಪ್ರಣಾಮ್ ಶೆಟ್ಟಿ, ಪ್ರಶಾಂತಿ ಶೆಟ್ಟಿರವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಉಮೇಶ್ ಪಂಜ ಸ್ವಾಗತಿಸಿದರು. ಪ್ರಕಾಶ್ ಶೆಟ್ಟಿ ಧನ್ಯವಾದ ಅರ್ಪಿಸಿದರು. ಬಳಿಕ ನೇಮೋತ್ಸವ ನಡೆಯಿತು.

Edited By : Manjunath H D
Kshetra Samachara

Kshetra Samachara

12/02/2021 10:58 am

Cinque Terre

16 K

Cinque Terre

0

ಸಂಬಂಧಿತ ಸುದ್ದಿ