ಮಂಗಳೂರು: ಈವರೆಗೆ ಇಲ್ಲದ ಹಿಜಾಬ್ ಧಾರಣೆ ವಿಚಾರದಲ್ಲಿ ವಿವಾದ ಸೃಷ್ಟಿಯಾಗಿದೆ. ಈ ಕುರಿತು ವಿವಾದ ಸೃಷ್ಟಿಸಿ ಕೋರ್ಟ್ ನಲ್ಲಿ ಕೇಸ್ ಆಗುವವರೆಗೂ ಬೆಳೆದಿದೆ. ಇದನ್ನು ಒಳ್ಳೆಯ ರೂಪದಲ್ಲಿ ಬಗೆಹರಿಸಬೇಕೆಂದು ಉಡುಪಿ ಧಾರ್ಮಿಕ ಗುರುಗಳಾದ ಖಾಝಿ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಆಗ್ರಹಿಸಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಎಲ್ಲಾ ಧರ್ಮೀಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರಲ್ಲ ಎಂಬ ವಿಶ್ವಾಸ, ನಂಬಿಕೆ ಎರಡೂ ನನಗಿದೆ. ಮುಂಚೆ ಯಾವ ರೀತಿ ಹಿಜಾಬ್ ಧರಿಸಲು ಅವಕಾಶ ಇತ್ತೋ, ಅದೇ ರೀತಿ ಅವಕಾಶ ಕೊಡಲಾಗುತ್ತದೆ ಎಂಬ ನಂಬಿಕೆ ಇದೆ. ಧಾರ್ಮಿಕ ಹಕ್ಕುಗಳನ್ನು ಪಾಲಿಸುವ ಜೊತೆಗೆ ಕಾನೂನನ್ನು ಪಾಲಿಸೋಣ ಎಂದು ಕರೆ ನೀಡಿದರು.
Kshetra Samachara
22/02/2022 02:54 pm