ಹುಲಿಕುಣಿತದ ಕ್ರೇಝ್ ಉಡುಪಿ ಜಿಲ್ಲೆಯಲ್ಲಿ ಉಳಿದ ಜಿಲ್ಲೆಗಳಿಗಿಂತ ತುಂಬ ಜೋರು. ಮಾತ್ರವಲ್ಲ ,ಇಲ್ಲಿನ ಹುಲಿ ವೇಷ ,ಕುಣಿತ ವಿಭಿನ್ನ. ಮೊನ್ನೆ ಅಷ್ಠಮಿ ದಿನ ಪ್ರಾರಂಭಗೊಂಡ ಹುಲಿವೇಷಧಾರಿಗಳ ಸಂಚಾರ ಗಣೇಶ ಚತುರ್ಥಿ ಮುಗಿದು, ಇದೀಗ ಗಣಪನ ವಿಸರ್ಜನೆ ಮೆರವಣಿಗೆಯಲ್ಲೂ ಮುಂದುವರೆದಿದೆ. ಈ ಮಧ್ಯೆ ಬ್ರಹ್ಮಾವರದ ಜಿ.ಎಮ್ ಸ್ಕೂಲ್ ಗೆ ಬಂದ ಹುಲಿವೇಷಧಾರಿಗಳ ಜೊತೆ ಅಲ್ಲಿನ ನೂರಾರು ಮಕ್ಕಳು ಕುಣಿದ ವಿಡಿಯೊ ವೈರಲ್ ಆಗುತ್ತಿದೆ .
ಇಲ್ಲಿಗೆ ಬಂದ ಹುಲಿವೇಷಧಾರಿಗಳು ಕುಣಿಯುವುದನ್ನು ವಿದ್ಯಾರ್ಥಿಗಳು ನೋಡಿ ಹುಚ್ಚೆದ್ದು ಕುಣಿದಿದ್ದಾರೆ. ಶಾಲಾ ಶಿಕ್ಷಕರು ಕೂಡ ಮಕ್ಕಳಿಗೆ ಮನಸೋ ಇಚ್ಚೆ ಕುಣಿಯಲು ಅನುಮತಿಸಿದ್ದರು. ನೂರಾರು ವಿದ್ಯಾರ್ಥಿಗಳು ಇದೇ ಚಾನ್ಸ್ ಎಂದುಕೊಂಡು ಹುಲಿವೇಷಧಾರಿಗಳ ಜೊತೆ ಸ್ಟೆಪ್ ಹಾಕಿದ್ದಾರೆ.
PublicNext
03/09/2022 05:17 pm