ಮೂಡುಬಿದಿರೆ: ತಾಲೂಕಿನ ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕೊಣಾಜೆ ಅಂಗನವಾಡಿ ಕೇಂದ್ರದಲ್ಲಿ ನರೇಗಾ ಯೋಜನೆಯ ಕೂಲಿಕಾರ್ಮಿಕರಿಗೆ ಹಾಗೂ ಅಸಂಘಟಿಕ ಕೂಲಿ ಕಾರ್ಮಿಕರಿಗೆ ಇ-ಶ್ರಮ್ ನೋಂದಣಿಯ ಜಾಗೃತಿ ಹಾಗೂ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಮೂಡುಬಿದಿರೆ ತಾಲೂಕು ಪಂಚಾಯತ್ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಚಾಲನೆ ನೀಡಿದರು.
ಕಾರ್ಯನಿರ್ವಾಹಕ ಅಧಿಕಾರಿಯವರು ಇ-ಶ್ರಮ್ ಕಾರ್ಡ್, ಆಯುಷ್ಮಾನ್ ಕಾರ್ಡ್ ನಿಂದಾಗುವ ಪ್ರಯೋಜನ ಹಾಗೂ ಮನರೇಗಾ ಯೋಜನೆಯ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಬಳಿಕ ಇ-ಶ್ರಮ್ ಕಾರ್ಡ್ ನ್ನು ವಿತರಿಸಲಾಯಿತು. 30 ಇ-ಶ್ರಮ್ ಕಾರ್ಡ್ ನೋಂದಣಿ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳಿಗೆ ಬನ್ನಿ ಸಮವಸ್ತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್, ಉಪಾಧ್ಯಕ್ಷ ರಾದ ಶಶಿಕಲಾ, ತಾಲೂಕು ಐಇಸಿ ಸಂಯೋಜಕರಾದ ಅನ್ವಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಗೂ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
06/03/2022 03:58 pm