ಉಡುಪಿ: ಉಡುಪಿಯ ಎಂಜಿಎಂ ಕಾಲೇಜು10 ದಿನಗಳ ನಂತರ ಪ್ರಾರಂಭವಾಗಲಿದೆ. ಎಂಜಿಎಂ ಕಾಲೇಜು ಕ್ಯಾಂಪಸ್ನಲ್ಲಿ ಫೆ.8 ರಂದು ಜಟಾಪಟಿ ನಡೆದಿತ್ತು.ಈ ಹಿನ್ನೆಲೆಯಲ್ಲಿ ಎಂಜಿಎಂ ಕ್ಯಾಂಪಸ್ಸಿಗೆ ಇಂದು ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.ಉಡುಪಿ ಎಸ್ಪಿ ವಿಷ್ಣುವರ್ದನ ಅವರು ಹೆಚ್ಚಿನ ಭದ್ರತೆಗಾಗಿ ಕೆಎಸ್ಆರ್ ಪಿ ತುಕಡಿಯನ್ನು ರವಾನೆ ಮಾಡಿದ್ದಾರೆ.
ಇವತ್ತು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.ಈ ಸಂಬಂಧ ಕಾಲೇಜು ಆಡಳಿತ ಮಂಡಳಿ ಗೇಟಿನಲ್ಲಿ ಬೋರ್ಡ್ ಹಾಕಿದೆ. ಹತ್ತು ದಿನಗಳ ರಜೆ ನಂತರ ಎಂಜಿಎಂ ಪದವಿ ವಿಭಾಗ ಓಪನ್ ಆಗಲಿದೆ.ಸದ್ಯ ಪದವಿ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
Kshetra Samachara
18/02/2022 10:45 am