ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ 'ಸ್ಕಾಲರ್ ಶಿಪ್ ಕೊಡಿ' ಆಂದೋಲನ

ಮಂಗಳೂರು: ಸರಕಾರದ ಸ್ಕಾಲರ್ ಶಿಪ್ ವಿಳಂಬ ನೀತಿಗೆ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಫೆಲೋಶಿಪ್ ಕಡಿತ ವಿಚಾರ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ನಗರದ ಪಾಂಡೇಶ್ವರ ಬಳಿ ಇರುವ ಅಲ್ಪಸಂಖ್ಯಾತರ ಭವನ‌ ಮುಂಭಾಗ ಧರಣಿ ನಡೆಸಿದರು. ನಗರದ ಸ್ಟೇಟ್ ಬ್ಯಾಂಕ್ ನಿಂದ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ಅಲ್ಪಸಂಖ್ಯಾತರ ಭವನ ಮುಂಭಾಗ 'ಸ್ಕಾಲರ್ ಶಿಪ್ ಕೊಡಿ' ಹೆಸರಿನಡಿ ಧರಣಿ ನಡೆಸಿದರು.

ನೂರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಮಾತನಾಡಿ, ಸರಕಾರದ ಬಳಿ ಸ್ಕಾಲರ್ ಶಿಪ್ ಹಣ ಕೊಡಲು ಅನುದಾನವಿಲ್ಲ. ಆದರೆ, ಮರಾಠ ಪ್ರಾಧಿಕಾರಕ್ಕೆ ಅನುದಾನ ನೀಡಲು ಹಣವಿದೆ. ಯಾವುದೇ ಕಾರಣಕ್ಕೂ ಸರಕಾರ ವಿದ್ಯಾರ್ಥಿ ವೇತನಕ್ಕೆ ತಡೆ ನೀಡಲು ಅವಕಾಶ ಕೊಡುವುದಿಲ್ಲ ಎಂದರು. ಈ ಸಂದರ್ಭ ಅಲ್ಪಸಂಖ್ಯಾತ ಭವನದ ಮುಖ್ಯದ್ವಾರದ ಗೇಟ್ ಬಂದ್ ಮಾಡಿ, ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

Edited By : Manjunath H D
Kshetra Samachara

Kshetra Samachara

30/11/2020 02:15 pm

Cinque Terre

9.04 K

Cinque Terre

0

ಸಂಬಂಧಿತ ಸುದ್ದಿ