ಬ್ರಹ್ಮಾವರ: ಇಲ್ಲಿನ ಇಕೋ ಕ್ಲಬ್ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳು ಗದ್ದೆಗಿಳಿದು ನಾಟಿ ಮಾಡುವ ಮೂಲಕ ಕೃಷಿಯ ಎಬಿಸಿಡಿ ಕಲಿತರು.
ಬ್ರಹ್ಮಾವರ ಕ್ಲಸ್ಟರ್ ನ ಹಂಗಾರಕಟ್ಟೆ ದೂಳಂಗಡಿ ಸರಕಾರಿ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳು ಐರೋಡಿ ಗಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಯಲ್ಲಿ ನಾಟಿ ಕೃಷಿ ಮಾಡಿದವರು. ಶಾಲೆಯ ಐವತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಭತ್ತ ನಾಟಿ ಮಾಡುವ ವಿಧಾನ, ಅದರ ಪೋಷಣೆ, ಮುಂದಿನ ಫಸಲು ಹೇಗೆ ಬರುತ್ತದೆ ಎಂಬ ಬಗ್ಗೆ ಶಿಕ್ಷಕರು , ಶಾಲಾಭಿವೃದ್ಧಿ ಸಮಿತಿ ಹಾಗೂ ಸ್ಥಳೀಯ ಕೃಷಿಕರಿಂದ ಮಾಹಿತಿ ಪಡೆದರು.
ಸ್ವತಃ ಕೆಸರು ಗದ್ದೆಗೆ ಇಳಿದು, ನಾಟಿ ಮಾಡುವ ಮೂಲಕ ಹೊಸ ಅನುಭವ ಪಡೆದುಕೊಂಡರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡೆನಿಸ್ ಡಿಸೋಜ, ತಮ್ಮ ಗದ್ದೆಯಲ್ಲಿ ವಿದ್ಯಾರ್ಥಿಗಳ ಚಟುವಟಿಕೆಗೆ ವೇದಿಕೆ ಕಲ್ಪಿಸಿದ್ದಲ್ಲದೆ, ಯಂತ್ರೋಪಕರಣ ನಾಟಿ ಮತ್ತು ಸಾಂಪ್ರಾಯಿಕ ನಾಟಿ ಬಗ್ಗೆ ಮಾಹಿತಿ ನೀಡಿದರು.
Kshetra Samachara
22/07/2022 10:28 pm