ಮುಲ್ಕಿ: ಹಿಂದೂ ಯುವ ಸೇನೆ ಮತ್ತು ಮಹಿಳಾ ಮಂಡಳಿ ಮುಲ್ಕಿ ಘಟಕದ ಆಶ್ರಯದಲ್ಲಿ 24ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಅಂಗವಾಗಿ ದಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿಯ ಗೌರವಾಧ್ಯಕ್ಷ ಭಾಸ್ಕರ ಚಂದ್ರ ಶೆಟ್ಟಿ ವಹಿಸಿದ್ದರು.
ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಮಂಡಲಾಧ್ಯಕ್ಷ ಸುನಿಲ್ ಆಳ್ವ, ಮಾತನಾಡಿ ಶಾರದೆಯ ಆಚರಣೆ ಮೂಲಕ ಜ್ಞಾನ ಮತ್ತು ವಿದ್ಯಾ ಲಭಿಸಿ ಶಾಂತಿ ನೆಲೆಸಲಿ ದೇವರ ಆರಾಧನೆಯ ಮೂಲಕ ಧರ್ಮ ಉಳಿಸುವ ಯತ್ನವಾಗಲಿ ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಲ್ಕಿ ವಿಜಯ ರೈತರ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ಚಲನಚಿತ್ರ ನಟ ಡಾ. ರಾಜಶೇಖರ ಕೋಟ್ಯಾನ್, ನಟ ನಿರ್ದೇಶಕ ಸಂದೇಶ ಶೆಟ್ಟಿ ಅಜಿರ್, ಉದ್ಯಮಿ ಭಾಸ್ಕರ ಸಾಲ್ಯಾನ್ ಹಳೆಯಂಗಡಿ, ಅನಿಲ್ ಕುಮಾರ್ ಕೊಲಕಾಡಿ, ವಾಸು ಪೂಜಾರಿ ಚಿತ್ರಾಪು,ಮುಂಬೈ ಬಂಟ್ಸ್ ಎಸೋಸಿಯೇಷನ್ ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ, ಕೋಟ ಹಿಂದೂ ಯುವ ಸೇನೆ ಅಧ್ಯಕ್ಷ ರವಿ ಶೆಟ್ಟಿ, ಮುಲ್ಕಿ ನ.ಪಂ ಸದಸ್ಯೆ ರಾಧಿಕಾ ಕೋಟ್ಯಾನ್ ಮುಲ್ಕಿ ಹಿಂದೂ ಯುವ ಸೇನೆ ಅಧ್ಯಕ್ಷ ಸತೀಶ್ ಕಿಲ್ಪಾಡಿ ಮಹಿಳಾ ಮಂಡಳಿ ಅಧ್ಯಕ್ಷೆ ನೀರಜಾ ಅಗರ್ವಾಲ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಿ. ದೇವರಾಜ ಅರಸು ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತೂರು ರವರನ್ನು ಗೌರವಿಸಲಾಯಿತು. ದಿನೇಶ್ ಕೋಲ್ನಾಡು ನಿರೂಪಿಸಿದರು. ಶಂಕರ್ ಪಡಂಗ ಧನ್ಯವಾದ ಅರ್ಪಿಸಿದರು
ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Kshetra Samachara
03/10/2022 09:23 pm