ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಹುಲಿವೇಷ ಸ್ಪರ್ಧಾಕೂಟ “ಕುಡ್ಲದ ಪಿಲಿ ಪರ್ಬ 2022′ ರವಿವಾರ ಬೆಳಗ್ಗಿನಿಂದ ತಡರಾತ್ರಿಯವರೆಗೆ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲು ಮಾರ್ಗದರ್ಶನದಲ್ಲಿ ಶಾಸಕ ಡಿ.ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಹುಲಿವೇಷ ಸ್ಪರ್ಧಾಕೂಟದಲ್ಲಿ ಒಟ್ಟು 12 ತಂಡಗಳು ಭಾಗವಹಿಸಿ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು. ಒಂದೊಂದು ತಂಡದಲ್ಲಿ ಒಟ್ಟು 15 ಹುಲಿವೇಷಧಾರಿಗಳಿದ್ದರು. ಸಾಂಪ್ರದಾಯಿಕ ಶೈಲಿಯ ನೆಲೆಯಲ್ಲಿಯೇ ಸ್ಪರ್ಧೆ ಆಯೋಜನೆಗೊಂಡಿತ್ತು.
ಬಾಯಿಯಲ್ಲಿ ಅಕ್ಕಿ ಮುಡಿ ಎತ್ತುವುದು, ಪಲ್ಟಿ ಹೊಡೆಯುದು, ಟೈಮಿಂಗ್, ಶಿಸ್ತು, ವಿಶಿಷ್ಟ ಸ್ಟೆಪ್ ಹೀಗೆ ಎಲ್ಲದಕ್ಕೂ ಪ್ರತ್ಯೇಕ ಅಂಕವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಪ್ರತೀ ತಂಡಕ್ಕೂ 20 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಹುಲಿವೇಷ ಕುಣಿತಕ್ಕೆ ಎತ್ತರದ ಸ್ಟೇಜ್ ವ್ಯವಸ್ಥೆ ಮಾಡಲಾಗಿದ್ದು, ಪ್ರೇಕ್ಷಕರಿಗೆ ಸುತ್ತಲೂ ಗ್ಯಾಲರಿ ವ್ಯವಸ್ಥೆ ಮಾಡಲಾಗಿತ್ತು.
ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು 'ಪೊಳಲಿ ಟೈಗರ್ಸ್' ಪ್ರಥಮ ಸ್ಥಾನ ಗಳಿಸಿದರೆ, ಕಾಳಿಚರಣ್ ಫ್ರೆಂಡ್ಸ್ ಬೋಳೂರು ದ್ವಿತೀಯ, ನಂದಿಗುಡ್ಡೆ ಫ್ರೆಂಡ್ಸ್ ಹುಲಿ ಬಾಬುಗುಡ್ಡೆ ತೃತೀಯ ಸ್ಥಾನ ಗಳಿಸಿತು. ವೈಯಕ್ತಿಕ ನೆಲೆಯಲ್ಲಿ ಕೋಡಿಕಲ್ ವಿಶಾಲ್ ಟೈಗರ್ಸ್ ಬ್ಲಾಕ್ ಟೈಗರ್, ತುಳುವೆರ್ ಕುಡ್ಲದ ಪರ್ಬದ ಪಿಲಿ, ಎಮ್ಮೆಕೆರೆ ಮರಿ ಹುಲಿ ಬಹುಮಾನ ಗಳಿಸಿತು. ಬಣ್ಣಗಾರಿಕೆಯಲ್ಲಿ ಕಾಳಿಚರಣ್ ಬಹುಮಾನ ಬಳಿಸಿದರೆ, ಧರಣಿ ಮಂಡಲ ಹಾಡಿಗೆ ಪೊಳಲಿ ತಂಡ ಬಹುಮಾನ ಗಳಿಸಿತು. ಮುಡಿ ಹಾರಿಸುವುದರಲ್ಲಿ ನಂದಿಗುಡ್ಡೆ ಫ್ರೆಂಡ್ಸ್ ಹುಲಿ (ಕೌಶಿಕ್ ಪೂಜಾರಿ), ತಾಸೆಯಲ್ಲಿ, ಕೊಡಿಯಾಲಬೈಲ್ ಫ್ರೆಂಡ್ಸ್, ಶಿಸ್ತಿನ ತಂಡವಾಗಿ ಜೈ ಶಾರದಾಂಬ ಪೇಜಾವರ ಪೊರ್ಕೋಡಿ ವೈಯಕ್ತಿಕ ಬಹುಮಾನ ಗಳಿಸಿತು.
Kshetra Samachara
03/10/2022 11:59 am