ಬೈಂದೂರು: ನಾಗೂರಿನ ಕೋಟ ವೈಕುಂಠ ನಾಯಕ್ ಸ್ಮರಣ ವೇದಿಕೆಯಲ್ಲಿ ಧಾರೇಶ್ವರ ಯಕ್ಷಬಳಗ ಚಾರಿಟೆಬಲ್ ಟ್ರಸ್ಟ್ ಕಿರಿಮಂಜೇಶ್ವರ ವತಿಯಿಂದ ಸೆ.18ರಿಂದ ಸೆ.24ರವರೆಗೆ ಯಕ್ಷಗಾನ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮವನ್ನು ಯಕ್ಷ ಪ್ರೇಮಿ, ಗೃಹ ಸಚಿವರಾದ ಆರಗ ಜ್ಞಾನೇಂದ್ರ ಉದ್ಘಾಟನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು , ಕರಾವಳಿ ಭಾಗದ ಯಕ್ಷಗಾನ ತಾಳಮದ್ದಳೆ ಕಲಾವಿದರಿಗೆ ಸರಕಾರದಿಂದ ಇನ್ನು ಮುಂದೆ ಹೆಚ್ಚಿನ ಪ್ರೋತ್ಸಾಹ ಹಾಗೂ ಪ್ರಶಸ್ತಿ ನೀಡಬೇಕು. ಹೀಗೆ ಪ್ರೋತ್ಸಾಹ ನೀಡುವ ಮೂಲಕ ಕಲಾವಿದರನ್ನು ಬೆಳೆಸುವ ಕೆಲಸ ಆಗಬೇಕು ಎಂದು ಹೇಳಿದರು.
ಇದೇ ಸಂದರ್ಭ ನಾಗೂರು ದಯಾನಂದ ಬಳಗಾರ್ ಅವರಿಗೆ ತೆಕ್ಕಟ್ಟೆ ಆನಂದ ಮಾಸ್ಟರ್ ಕಲಾತಪಸ್ವಿ ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲಾಯಿತು. ರಂಗಸ್ಥಳ ಫೌಂಡೇಷನ್ ಟ್ರಸ್ಟ್ ನ 74ರ ವಾರ್ಷಿಕ ಸಡಗರ ಮತ್ತು ಕಾರುಣ್ಯನಿಧಿ ಸಮರ್ಪಣೆಯ ಆಮಂತ್ರಣ ಪತ್ರಿಕೆಯನ್ನು ಗೃಹ ಸಚಿವರು ಬಿಡುಗೊಡೆಗೊಳಿಸಿದರು. ಈ ಸಂದರ್ಭದಲ್ಲಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
19/09/2022 04:54 pm