ಉದ್ಯಾವರ : ಕಥೋಲಿಕ್ ಸಭಾ ಉದ್ಯಾವರ ಮತ್ತು ಉದ್ಯಾವರೈಟ್ಸ್ ದುಬೈ ಇವರ ನೇತೃತ್ವದಲ್ಲಿ ಯುವ, ಸ್ತ್ರೀ ಮತ್ತು ಕುಟುಂಬ ಆಯೋಗದ ಸಹಭಾಗಿತ್ವದಲ್ಲಿ ಉದ್ಯಾವರದ ಸಂತ ಫ್ರಾನ್ಸಿಸ್ ಝೇವಿಯರ್ ವಿದ್ಯಾಸಂಸ್ಥೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಮಾಡಲಾಯಿತು.
ಝೇವಿಯರ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಮತ್ತು ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಅ. ವಂ. ಸ್ಟ್ಯಾನಿ ಬಿ ಲೋಬೊ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿ, ಗೌರವ ಧನ ವಿತರಿಸಿ, ಸನ್ಮಾನಿಸಿದರು.
ಸಂತ ಫ್ರಾನ್ಸಿಸ್ ಝೇವಿಯರ್ ಕನ್ನಡ ಪ್ರೌಢಶಾಲೆ, ಆಂಗ್ಲಮಾಧ್ಯಮ ಪ್ರೌಢಶಾಲೆ ಮತ್ತು ಉನ್ನತ ವಿದ್ಯಾಭ್ಯಾಸದಲ್ಲಿ ಸಾಧನೆಗೈದ 25 ವಿದ್ಯಾರ್ಥಿಗಳನ್ನು ಗೌರವಿಸಿ, ಉದ್ಯಾವರೈಟ್ಸ್ ದುಬೈ ಪ್ರಾಯೋಜಕತ್ವ ವಹಿಸಿದ ಗೌರವಧನ ವಿತರಿಸಿಲಾಯಿತು.
ಇದೇ ಸಂದರ್ಭದಲ್ಲಿ ಮಂಗಳೂರಿನ ಫಾದರ್ ಮುಲ್ಲರ್ಸ್ ಇನ್ಸ್ಟಿಟ್ಯೂಟ್ ನ ಡೀನ್ ಆಗಿ ನೇಮಕಗೊಂಡಿರುವ ಡಾ. ಉರ್ಬನ್ ಡಿಸೋಜ, ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಕ್ಲ್ಯಾರಿನ್ ಪಿಂಟೊ, ಆಯುರ್ವೇದ ವೈದ್ಯೆ ಡಾ. ಸಿಲ್ವಿನಿಯ ಫೆರ್ನಾಂಡಿಸ್ ಮತ್ತು ಹಿರಿಯ ಕ್ರೀಡಾಪಟು ಮತ್ತು ಕಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಅಂದ್ರಾದೆ ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಹಾಯಕ ಧರ್ಮಗುರು ವಂ. ಲಿಯೋ ಪ್ರವೀಣ್ ಡಿಸೋಜ, ಉದ್ಯಾವರೈಟ್ಸ್ ದುಬೈ ಸ್ಥಾಪಕಾಧ್ಯಕ್ಷ ಜೆರಾಲ್ಡ್ ಪಿರೇರಾ, ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ, ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷೆ ಮೇರಿ ಡಿಸೋಜ, ಉಪಾಧ್ಯಕ್ಷ ರೊನಾಲ್ಡ್ ಅಲ್ಮೇಡಾ, ಪ್ರಮುಖರಾದ ಲೋರೆನ್ಸ್ ಡೇಸಾ, ಐರಿನ್ ಪಿರೇರಾ, ರೊಯ್ಸ್ ಫೆರ್ನಾಂಡಿಸ್, ವಿಲ್ ಫ್ರೆಡ್ ಕ್ರಾಸ್ಟೊ, ಟೆರೆನ್ಸ್ ಪಿರೇರಾ, ಜೆಫ್ರಿ ಕಸ್ತಲಿನೊ, ಆಸ್ಕರ್ ರೆಬೆಲ್ಲೋ, ಡೊನಾಲ್ಡ್ ಮಚಾದೋ ಮತ್ತಿತರರು ಉಪಸ್ಥಿತರಿದ್ದರು.
ಮೈಕಲ್ ಡಿಸೋಜ ಸ್ವಾಗತಿಸಿದರೆ, ಅನಿಲ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು. ಫ್ರಾಂಕ್ಯಿ ಕರ್ಡೋಜಾ ಧನ್ಯವಾದ ಸಮರ್ಪಿಸಿದರು.
Kshetra Samachara
07/09/2022 06:03 pm