ಉಡುಪಿ: ನಗರದ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಪ್ರಸನ್ನ ಗಣಪತಿ ಸನ್ನಿಧಾನದಲ್ಲಿ ಗೌರಿ ಪೂಜೆಯ ಪರ್ವಕಾಲದಲ್ಲಿ ಸಹಸ್ರಮೋದಕ ಗಣ ಯಾಗ ಹಾಗೂ ನವಕ ಕಲಶ ಪ್ರಧಾನ ಹೋಮ ಹಾಗೂ ಚಿನ್ನದ ಮುಖ ಕವಚ ಸಮರ್ಪಣೆಯು ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜೀ ಮಾರ್ಗದರ್ಶನದಲ್ಲಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಸೇವಾ ಕತೃ ಸುರತ್ಕಲ್ ನ ದೀಪಕ್ ರವರು ಸಮರ್ಪಿಸಿದರು .
ಮಧ್ಯಾಹ್ನ ಮೂಡುಗಣಪತಿ ಸೇವೆ ಪ್ರಸನ್ನ ಪೂಜೆ ಹಾಗೂ ಸಂಜೆ ರಂಗಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಉದ್ಯಮಿ ರಾಜೇಶ್ ಶೇಟ್ ಪ್ರಜ್ಞೆಾಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಉಷಾ ರಮಾನಂದ್,ಆನಂದ್ ಬಾಯಾರಿ ಲಿಖಿತ್ ಶೆಟ್ಟಿ ಕೇಳ್ದನ್ ಕೊರಂಗ್ರಪಾಡಿ ನಾರಾಯಣ ತಂತ್ರಿ, ಕ್ಷೇತ್ರದ ಕುಸುಮಾ ನಾಗರಾಜ್, ಶಾರದಮ್ಮ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
31/08/2022 05:38 am