ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಸ್ವಸಹಾಯ ಸಂಘದ ಸದಸ್ಯರಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರ

ಕುಂದಾಪುರ: ಮನುವಿಕಾಸ ಸಂಸ್ಥೆ ಶಿರಸಿ ಮತ್ತು ಹೆಚ್ ಡಿ ಎಫ್ ಸಿ ಬ್ಯಾಂಕ್ ಪರಿವರ್ತನ ಇವರ ಸಂಯೋಗದಲ್ಲಿ ಕೊಂಕಣ ಖಾರ್ವಿ ಸಭಾ ಭವನ್ ನಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಎರಡು ದಿನದ ಸ್ವಸಹಾಯ ಸಂಘದ ಪುಸ್ತಕ ಮತ್ತು ಬ್ಯಾಂಕಿನ ಹಣಕಾಸು ನಿರ್ವಹಣೆ ಬಗ್ಗೆ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತ್ರಾಸಿ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶೋಭಾ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೀತಾ, ಮನುವಿಕಾಸ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಆದ ಮೋಹನ್ ಸಿದ್ದಿ ಮತ್ತು ಬಿಸಿನೆಸ್ ಡೆವಲಪ್ಮೆಂಟ್ ಆಫೀಸರ್ ಪವನ್ ಬೊಮ್ಮನಹಳ್ಳಿ ಹಾಜರಿದ್ದರು.ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ರಾಘವೇಂದ್ರ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ್ ಮತ್ತು ಆಶಾಲತಾ, ಅಮೂಲ್ಯ ಸಾಕ್ಷರತಾ ಕೆನರಾ ಬ್ಯಾಂಕ್ ಇವರು ಆಗಮಿಸಿದ್ದರು. ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭ ಉದ್ಘಾಟಿಸಿದರು.

ಮನುವಿಕಾಸ ಸಂಸ್ಥೆಯ ಬಗ್ಗೆ ಪ್ರಾಸ್ತಾವಿಕ ಮಾತನಾಡಿ ಮೋಹನ್ ಸಿದ್ದಿಯವರು ಸಂಸ್ಥೆಯು 19 ವರ್ಷಗಳಲ್ಲಿ ನಡೆದು ಬಂದ ಹಾದಿ ಮತ್ತು ಮುಂಬರುವ ದಿನಗಳಲ್ಲಿ ಮೀನುಗಾರರ ಸಮುದಾಯದವರಿಗೆ ಆಯೋಜಿಸಿರುವ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ ರಾಘವೇಂದ್ರ ಅವರು ಸ್ವ ಸಹಾಯ ಸಂಘದ ನಿರ್ವಹಣೆ, ಅದರ ಪ್ರಾಮುಖ್ಯತೆ ಮತ್ತು ಲೆಕ್ಕ ಪುಸ್ತಕಗಳ ನಿರ್ವಹಣೆಯ ಮಹತ್ವವನ್ನು ವಿವರಿಸಿದರು.

ಶ್ರೀಮತಿ ಆಶಾಲತಾ ಬ್ಯಾಂಕ್ ಲಿಂಕ್, ಚೆಕ್ ಬುಕ್, ಬ್ಯಾಂಕ್ ವ್ಯವಹಾರ, SHG a/c ಗೆ ಇರುವಂತ ಸೌಲಭ್ಯದ ಬಗ್ಗೆ, ಖಾತಾ ನಿರ್ವಹಣೆ ಬಗ್ಗೆ ತಿಳಿಸಿಕೊಟ್ಟರು. ಎರಡನೇ ದಿನದ ತರಬೇತಿಯಲ್ಲಿ ಮನುವಿಕಾಸ ಸಂಸ್ಥೆ ವತಿಯಿಂದ ಸಿಬ್ಬಂದಿಗಳಾದ ಪವನ್ ಬೊಮ್ಮನಹಳ್ಳಿ ಹಾಗೂ ಜಗದೀಶ್ ನಾಯ್ಕ ರವರು ಸಂಸ್ಥೆ ವತಿಯಿಂದ ನೀಡಲಾದ ಸ್ವ ಸಹಾಯ ಸಂಘ ನಿರ್ಣಯ ಪುಸ್ತಕ ವನ್ನು ಬರೆಯುವ ರೀತಿ ಹಾಗೂ ಅದರ ಪ್ರತ್ಯಕ್ಷತೆ ತಿಳಿಸಿಕೊಟ್ಟರು. ತದನಂತರ ಮೋಹನ್ ಸಿದ್ದಿಯವರು ನಿರ್ಣಯ ಪುಸ್ತಕದ ಮಹತ್ವ, ಸಂಘ ಸಭೆ ನಡೆಸುವ ಬಗ್ಗೆ, ನಿರ್ಣಯ ಪುಸ್ತಕ ಬರೆಯುವ ಬಗ್ಗೆ ಪ್ರಾಯೋಗಿವಾಗಿ ಸಂಘದ ಸದಸ್ಯರುಗಳಿಗೆ ತಿಳಿಸಿಕೊಟ್ಟರು.

ತರಬೇತಿಯನ್ನು ಪಡೆದ ಸ್ವ ಸಂಘದವರು ವೇದಿಕೆಗೆ ಬಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಹಾಗೂ ಸಂಸ್ಥೆಯಿಂದ ತಮಗೆ ಆದ ಲಾಭಗಳು ಹಾಗೂ ಕಲಿಕೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಅದೇ ದಿನ ಸಂಜೆ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ HDFC ಪರಿವರ್ತನ ಇವರ ಸಹಯೋಗದಲ್ಲಿ ಮೀನುಗಾರ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ವಿವಿಧ ಪರಿಕರಣೆಗಳನ್ನು ವಿತರಿಸಲಾಯಿತು. ಈ ಸಭೆಯಲ್ಲಿ ಮನುವಿಕಾಸ ಸಂಸ್ಥೆಯ ನಿರ್ದೇಶಕರಾದ ಗಣಪತಿ ಭಟ್, ಮೀನುಗಾರ ಸಮುದಾಯದ‌ ಪ್ರಮುಖರಾದ.ಮಹೇಶ್ ಖಾರ್ವಿ ಮತ್ತು ಮನುವಿಕಾಸ ಸಿಬ್ಬಂದಿಗಳು ಹಾಜರಿದ್ದರು.

ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ ಸಭೆಯನ್ನುದ್ದೇಶಿಸಿ ಸ್ವ ಉದ್ಯೋಗ ಪರಿಕರಗಳನ್ನು ಕೊಡುವ ಉದ್ದೇಶ ಹಾಗೂ ತಮ್ಮ ಸಂಸ್ಥೆಯ ಯೋಜನೆಗಳನ್ನು ಸಭೆಗೆ ತಿಳಿಸಿದರು.ತದನಂತರ ಆಯ್ದು ಪಲಾನುಭವಿಗಳಿಗೆ ಫ್ರಿಜ್, ಟೈಲರಿಂಗ್ ಮಷಿನ್, ಝೆರಾಕ್ಸ್ ಮಷಿನ್,‌ ಸ್ಕ್ರೀನ್ ಪ್ರಿಂಟರ್, ಮಿಕ್ಸಿ, ಫಿಶ್ ನೆಟ್ ಗಳನ್ನು ವಿತರಿಸಲಾಯಿತು. ಒಟ್ಟೂ 8 ಜನ ಪಲಾನುಭವಿಗಳಿಗೆ ಸ್ವ ಉದ್ಯೋಗದ ಪರಿಕರಗಳನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಕುಂದಾಪುರ ತಾಲೂಕಿನ ನಿರ್ವಾಹಕರಾದ ಜಗದೀಶ್ ನಾಯ್ಕ ನಿರ್ವಹಿಸಿದರು. ಸುಬ್ಬರಾವ್ ಮತ್ತು ಕುಮಾರ್ ನಾಯ್ಕ ಕಾರ್ಯಕ್ರಮವನ್ನು ಆಯೋಜಿಸಿದ್ದರು.

Edited By : PublicNext Desk
Kshetra Samachara

Kshetra Samachara

26/08/2022 08:43 pm

Cinque Terre

2.16 K

Cinque Terre

0

ಸಂಬಂಧಿತ ಸುದ್ದಿ